ಬೆಂಗಳೂರು: ‘ಶಿಕ್ಷಣದಿಂದ ವಂಚಿತರಾಗಿರುವ ಬಡ ಮಕ್ಕಳಿಗೆಅವಕಾಶ ದೊರೆತರೆ ಅವರೂ ಉನ್ನತ ಸ್ಥಾನ
ಗಳನ್ನು ಅಲಂಕರಿಸಬಲ್ಲರು. ಶಿಕ್ಷಣ ವ್ಯವಸ್ಥೆಯಲ್ಲಿರುವ ತಾರತಮ್ಯ ವ್ಯವಸ್ಥೆ ಹೋಗಲಾಡಿಸಲು ಸರ್ಕಾರ ಗಮನ ಹರಿಸಬೇಕು’ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಒತ್ತಾಯಿಸಿದರು.
ಕಬೀರ್ ಟ್ರಸ್ಟ್ ವತಿಯಿಂದ ತರಳಬಾಳು ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ 33ನೇ ವಾರ್ಷಿಕೋತ್ಸವ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಉಚಿತ ತರಬೇತಿ ತರಗತಿಗಳ ಸಮಾರೋಪ ಉದ್ಘಾಟಿಸಿಮಾತನಾಡಿದರು.
‘ಪ್ರತಿ ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಲೋಕಾಯುಕ್ತನಾಗಿ ಭೇಟಿ ನೀಡಿದ್ದೇನೆ.ಶಿಕ್ಷಣಕ್ಕೆ ಜಾತಿ ಪ್ರತಿಭೆ ಅಡ್ಡಿ ಬರುವುದಿಲ್ಲ ಎಂಬುದು ಮನದಟ್ಟಾಯಿತು’ ಎಂದು ಹೇಳಿದರು.
ಶಾಸಕ ಬೈರತಿ ಸುರೇಶ್, ‘ಲಾಭದ ನಿರೀಕ್ಷೆ ಇಲ್ಲದೆ ಮಕ್ಕಳಿಗೆ ಶಿಕ್ಷಣ ತರಬೇತಿ ನೀಡುವ ಸಂಸ್ಥೆಗಳು ಬೆರಳೆಣಿಕೆಯಷ್ಟು ಮಾತ್ರ. ಅಂತಹ ಸಂಸ್ಥೆಗಳಲ್ಲಿ ಕಬೀರ್ ಟ್ರಸ್ಟ್ ಮೊದಲ ಸ್ಥಾನದಲ್ಲಿದೆ. ಮಕ್ಕಳಿಗೆ ತರಬೇತಿ ನೀಡಲು ಕಟ್ಟಡದ ಕೊರತೆಯಿದೆ ಎಂದುಟ್ರಸ್ಟ್ ಮುಖ್ಯಸ್ಥರು ತಿಳಿಸಿದ್ದಾರೆ. ಸರ್ಕಾರ ಮತ್ತು ಶಾಸಕರ ನಿಧಿಯಿಂದ ₹20 ಲಕ್ಷ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.
ಟ್ರಸ್ಟ್ ಮುಖ್ಯಸ್ಥ ಟಿ.ಪ್ರಭಾಕರ್, 'ಪೋಷಕರು ತಮ್ಮ ಮಕ್ಕಳನ್ನು ದೈಹಿಕವಾಗಿ ಬೆಳೆಸುತ್ತಾರೆ. ಗುರುಗಳು ಅವರ ಭವಿಷ್ಯವನ್ನು ರೂಪಿಸುತ್ತಾರೆ’ ಎಂದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಎಂಟು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.