ADVERTISEMENT

ಭೂವೀಕ್ಷಕ ಉಪಗ್ರಹ ‘ನಿಸಾರ್‌’: ಪೇಲೋಡ್‌ ಭಾರತಕ್ಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 3:55 IST
Last Updated 2 ಜೂನ್ 2022, 3:55 IST
ಡಾ.ಥಾಮಸ್‌ ಜುರ್ಬುಚೆನ್‌
ಡಾ.ಥಾಮಸ್‌ ಜುರ್ಬುಚೆನ್‌   

ಬೆಂಗಳೂರು: ಅಮೆರಿಕಾದ ‘ನಾಸಾ’ ಮತ್ತು ಭಾರತದ ‘ಇಸ್ರೊ’ ಜಂಟಿಯಾಗಿ ಅಭಿವೃದ್ಧಿಪಡಿಸಿ ಉಡಾವಣೆ ಮಾಡಲಿರುವ ಭೂವೀಕ್ಷಕ ಉಪಗ್ರಹದ ‘ನಾಸಾ– ಇಸ್ರೊ ಸಿಂಥೆಟಿಕ್‌ ಅಪರ್ಚರ್‌ ರಾಡಾರ್‌’ (ನಿಸಾರ್) ನ ಪೇಲೋಡ್‌ನ ಜೋಡಣೆ ಕಾರ್ಯ ಅಮೆರಿಕಾದಲ್ಲಿ ಮುಗಿದ್ದು, ಅದನ್ನು ಉಪಗ್ರಹಕ್ಕೆ ಅಳವಡಿಸಲು ಭಾರತಕ್ಕೆ ಸದ್ಯವೇ ಕಳುಹಿಸಲಾಗುವುದು.

ಇಸ್ರೊ ತನ್ನ ಉಡಾವಣೆ ವಾಹನದ ಮೂಲಕ ಈ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಭಾರತ ಮತ್ತು ಅಮೆರಿಕಾದ ವಿಶಾಲ ಭೂಪ್ರದೇಶ, ಭೂಮಿಯ ಮೇಲ್ಪದರ, ಘನೀಕೃತ ರೂಪದಲ್ಲಿರುವ ನೀರು, ಸಮುದ್ರದಲ್ಲಿನ ಮಂಜುಗಡ್ಡೆ, ಮಂಜುಗಡ್ಡೆ ಆವರಿಸಿದ ಸರೋವರ, ಹೆಪ್ಪುಗಟ್ಟಿದ ನದಿ, ನೀರ್ಗಲ್ಲು ಮತ್ತು ಹಿಂದೂ ಮಹಾಸಾಗರದ ಮೇಲೆ ಈ ಉಪಗ್ರಹವು ಕಣ್ಣಿಡಲಿದೆ.

ನಾಸಾ ಸೈನ್ಸ್‌ ಮಿಷನ್‌ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಡಾ.ಥಾಮಸ್‌ ಜುರ್ಬುಚೆನ್‌ ಮತ್ತು ಅಧಿಕಾರಿಗಳ ತಂಡ ಈ ವಿಚಾರವಾಗಿ ಇಸ್ರೊ ಅಧಿಕಾರಿಗಳ ಜತೆ ಸಭೆ ನಡೆಸಿದರು.

ADVERTISEMENT

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಥಾಮಸ್‌ ಅವರು, ‘ಅಮೆರಿಕಾ ಮತ್ತು ಭಾರತದ ಮಧ್ಯೆ ಅತ್ಯಂತ ದೊಡ್ಡ ಸಹಯೋಗದ ಯೋಜನೆ ಇದಾಗಿದ್ದು, ಇಸ್ರೊ ಅಧ್ಯಕ್ಷ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಮಾತುಕತೆ ನಡೆಸಿದ್ದೇವೆ‘ ಎಂದರು. ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲು ಬಂದಿದ್ದ ಅವರು ಸುದ್ದಿಗಾರರ ಜತೆ ಮಾಹಿತಿ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.