ADVERTISEMENT

ಪೀಣ್ಯದಾಸರಹಳ್ಳಿ: ಅವೈಜ್ಞಾನಿಕ ರಸ್ತೆ ಉಬ್ಬು ತೆರವು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 19:16 IST
Last Updated 27 ಅಕ್ಟೋಬರ್ 2018, 19:16 IST
ರಸ್ತೆ ಉಬ್ಬನ್ನು ಜೆಸಿಬಿ ಯಂತ್ರದಿಂದ ತೆಗೆಸುತ್ತಿರುವುದು
ರಸ್ತೆ ಉಬ್ಬನ್ನು ಜೆಸಿಬಿ ಯಂತ್ರದಿಂದ ತೆಗೆಸುತ್ತಿರುವುದು   

ಬೆಂಗಳೂರು: ಪೀಣ್ಯದಾಸರಹಳ್ಳಿ ಸಮೀಪ ಚೊಕ್ಕಸಂದ್ರದ ನಾರಾಯಣಪುರದಲ್ಲಿ ಮೂರು ಕಡೆ ಅವೈಜ್ಞಾನಿಕವಾಗಿ ಹಾಕಲಾಗಿದ್ದ ರಸ್ತೆ ಉಬ್ಬನ್ನು ಶನಿವಾರ ತೆರವುಗೊಳಿಸಲಾಯಿತು.

ಈ ಕುರಿತು ಶನಿವಾರ ‘ಪ್ರಜಾವಾಣಿ’ ಸುದ್ದಿ ಪ್ರಕಟಿಸಿತ್ತು. ಟ್ರಾಫಿಕ್‌ ಇನ್ಸ್‌ಪೆಕ್ಟರ್‌ ಧರ್ಮಪ್ಪ ಮತ್ತು ಎಂಜಿನಿಯರ್ ಚಿತ್ತಯ್ಯ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಟ್ರ್ಯಾಕ್ಟರ್‌ ಹಾಗೂ ಜೆಸಿಬಿ ಮೂಲಕ ಉಬ್ಬನ್ನು ತೆರವುಗೊಳಿಸಲಾಯಿತು.

ಸ್ಥಳೀಯರು ತೆರವು ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದರು. ಎಂಜಿನಿಯರ್‌ ಚಿತ್ತಯ್ಯ ಅವರು ಸಾರ್ವಜನಿಕರನ್ನು ಸಮಾಧಾನಪಡಿಸಿದರು. ‘ಉಬ್ಬನ್ನು ಹಾಕಲು ಕೆಲವು ನಿಯಮಗಳು ಇವೆ. ವಾಹನ ಸವಾರರಿಗೆ ತೊಂದರೆಯಾಗದಂತೆ ವೈಜ್ಞಾನಿಕವಾಗಿ ಹಾಕಲು ಅನುಮತಿ ಕೊಡಿಸುತ್ತೇವೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.