ಪೀಣ್ಯ ದಾಸರಹಳ್ಳಿ: ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಬೆಂಗಳೂರು ಪಾಟೀದಾರ್ ಸಮಾಜದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಒಂಬತ್ತು ದಿನಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಪ್ರತಿ ದಿನ ಮಹಿಳೆಯರ ನೃತ್ಯ, ಗಾಯನ, ಭಜನೆ ಜರುಗಿದವು. ವಿಶೇಷವಾಗಿ ನವರಾತ್ರಿ ಗಾರ್ಬ, ದಾಂಡಿಯಾ ನೃತ್ಯಗಳು, ಮಹಿಳೆಯರ ಕೋಲಾಟ ಗಾಯನ ಗಮನ ಸೆಳೆಯಿತು.
ಶನಿವಾರ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಎಸ್ ಮುನಿರಾಜು ಪಾಲ್ಗೊಂಡರು. ಈ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಮಾತನಾಡಿ ‘ನಮ್ಮ ಆಚಾರ, ವಿಚಾರ, ಸಂಸ್ಕೃತಿ ಎತ್ತಿಹಿಡಿಯುವ, ದೇವಿಯರನ್ನು ಪೂಜಿಸುವ ಶುಭ ಸಮಾರಂಭವೇ ನವರಾತ್ರಿ' ಎಂದು ತಿಳಿಸಿದರು.
ಶಾಸಕ ಎಸ್. ಮುನಿರಾಜು 'ಬೆಂಗಳೂರಿನಲ್ಲಿ ಪಾಟೀದಾರ್ ಸಮುದಾಯವೂ ಕೂಡ ಒಂದು ದೊಡ್ಡ ಸಮುದಾಯ. ಈಗಾಗಲೇ ಬೆಂಗಳೂರಿನಲ್ಲಿ 10 ಪಾಟೀದಾರ್ ಭವನಗಳು ಇದೆ. ಇವರ ಸಂಪ್ರದಾಯ, ಆಚಾರ ವಿಚಾರ ಪೂಜೆ ಈ ನವರಾತ್ರಿಯಲ್ಲಿ ವಿಜೃಂಭಣೆಯಿಂದ ಸಾಗಿದೆ' ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.