ADVERTISEMENT

ವಿದ್ಯಾಪೀಠದಲ್ಲಿ ಪೇಜಾವರ ವಿಶ್ವೇಶ ತೀರ್ಥರ ಆರಾಧನಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 5:45 IST
Last Updated 9 ಜನವರಿ 2020, 5:45 IST
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಆವರಣದಲ್ಲಿ ಪೇಜಾವರ ವಿಶ್ವೇಶ ತೀರ್ಥರ ಆರಾಧನಾ ಮಹೋತ್ಸವ ಗುರುವಾರ ನಡೆಯಿತು.
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಆವರಣದಲ್ಲಿ ಪೇಜಾವರ ವಿಶ್ವೇಶ ತೀರ್ಥರ ಆರಾಧನಾ ಮಹೋತ್ಸವ ಗುರುವಾರ ನಡೆಯಿತು.   
""
""

ಬೆಂಗಳೂರು:ಹನ್ನೆರಡು ದಿನಗಳ ಹಿಂದೆ ಇಹಲೋಕ ತ್ಯಜಿಸಿರುವ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಆರಾಧನೋತ್ಸವ ಗುರುವಾರ ವಿದ್ಯಾಪೀಠದ ಆವರಣದಲ್ಲಿ ಆರಂಭವಾಗಿದೆ. ಮಾಧ್ವ ಸಂಪ್ರದಾಯದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಬೆಳಿಗ್ಗೆ ವಿರಾಜ ಹೋಮ ನಡೆಯಿತು.

ಇದೀಗ 24 ಮಂದಿ ವಿದ್ವಾಂಸರಿಂದ ಪುರಾಣಗಳ ವಾಚನ ನಡೆಯುತ್ತಿದೆ. ಬಳಿಕ 108 ಯತಿಗಳು, ಬ್ರಾಹ್ಮಣರ ಪಾದಪೂಜೆ ನಡೆಯಲಿದೆ. ಬೃಂದಾವನಕ್ಕೆ ಭಕ್ತರು ಬರತೊಡಗಿದ್ದು, ಧಾರ್ಮಿಕ ವಿಧಿವಿಧಾನಗಳ ಫೊಟೊ ಸೆರೆಹಿಡಿಯಲು, ವಿಡಿಯೊಚಿತ್ರೀಕರಿಸಲು ಅವಕಾಶ ನೀಡಿಲ್ಲ.

ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳೆಲ್ಲ ಇಂದೇ (ಗುರುವಾರ) ನಡೆಯಲಿವೆ. ಇದೇ 11ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ.

ADVERTISEMENT
ವಿದ್ಯಾಪೀಠ ಆವರಣದಲ್ಲಿ ತಾಳಮದ್ದಳೆ

ವಿಶ್ವೇಶ ತೀರ್ಥರ ಮೆಚ್ಚಿನ ತಾಳಮದ್ದಳೆ

ಪೇಜಾವರ ವಿಶ್ವೇಶ ತೀರ್ಥರಆರಾಧನೋತ್ಸವ ಪ್ರಯುಕ್ತ ಬುಧವಾರ ಮಧ್ಯರಾತ್ರಿಯಿಂದಲೇ ವಿದ್ಯಾಪೀಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಶ್ರೀಗಳಿಗೆ ಪ್ರಿಯವಾದ 'ನಚಿಕೇತ' ಯಕ್ಷಗಾನ ತಾಳಮದ್ದಳೆ ನಡೆಯಿತು. ಶ್ರಿ ಹರಿ ಆಚಾರ್ಯರು ಯಮನ ಪಾತ್ರದಲ್ಲಿ ಮತ್ತು ಕೃಷ್ಣಕುಮಾರ್ ಆಚಾರ್ಯರು ನಚಿಕೇತನ ಪಾತ್ರದಲ್ಲಿ ಶಾಸ್ತ್ರೀಯ ಸಂವಾದ ನಡೆಸಿಕೊಟ್ಟರು.

ಬೆಂಗಳೂರಿನ ವಿಶ್ವೇಶ ತೀರ್ಥರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ವಿವಿಧ ಮಠಾಧೀಶರು

ಆರಾಧನೋತ್ಸವದಲ್ಲಿ ಉಡುಪಿ ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಗಳು, ಪೇಜಾವರ ಮಠದ ವಿಶ್ವ ಪ್ರಸನ್ನ ಶ್ರೀಗಳು, ಕಾಣಿಯೂರು ಮಠದ ವಿದ್ಯಾವಲ್ಲಭ ಶ್ರೀಗಳು, ಸುಬ್ರಹ್ಮಣ್ಯ ಮಠದ
ವಿದ್ಯಾಪ್ರಸನ್ನ ಶ್ರೀಗಳು, ಸೋದೆ ಮಠದ ವಿಶ್ವವಲ್ಲಭ ಶ್ರೀಗಳು, ಭೀಮಸೇತು ಮುನಿವರದ ಮಠದ ರಘುವರೇಂಸ್ರ ತೀರ್ಥ ಶ್ರೀಗಳು, ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರು ಪಾಲ್ಗೊಂಡಿದ್ದಾರೆ.

‘ಪ್ರಜಾವಾಣಿ’ ಬರಹಗಳಲ್ಲಿ ಪೇಜಾವರಶ್ರೀ ನೆನಪು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.