ADVERTISEMENT

ಬೆಂಗಳೂರು: ತಾಯಿಯ ಅಶ್ಲೀಲ ಫೋಟೊ ಕಳುಹಿಸಿ ಮಗಳಿಗೆ ಬ್ಲ್ಯಾಕ್‌ಮೇಲ್

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 15:15 IST
Last Updated 28 ಏಪ್ರಿಲ್ 2024, 15:15 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಮಹಿಳೆಯೊಬ್ಬರ ಫೋಟೊವನ್ನು ಅಶ್ಲೀಲವಾಗಿ ಸೃಷ್ಟಿಸಿ ಅದನ್ನು ಅವರ ಮಗಳಿಗೆ ಕಳುಹಿಸಿ, ಯುವಕನೊಬ್ಬ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ 18 ವರ್ಷ ವಯಸ್ಸಿನ ಯುವತಿ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ದೂರುದಾರ ಯುವತಿ, ಇನ್‌ಸ್ಟಾಗ್ರಾಂನಲ್ಲಿ ಖಾತೆ ಹೊಂದಿದ್ದಾರೆ. ಅವರ ಖಾತೆಗೆ 2023ರ ಸೆಪ್ಟೆಂಬರ್‌ನಲ್ಲಿ ಅಪರಿಚಿತ ವ್ಯಕ್ತಿಯಿಂದ ಸಂದೇಶ ಬಂದಿತ್ತು. ತಾಯಿಯ ಫೋಟೊವನ್ನು ಅಶ್ಲೀಲವಾಗಿ ಸೃಷ್ಟಿಸಿ ಕಳುಹಿಸಲಾಗಿತ್ತು. ಫೋಟೊ ಅಳಿಸಿ ಹಾಕುವಂತೆ ಯುವತಿ ಕೋರಿದ್ದರು. ಅದಕ್ಕೆ ಅಪರಿಚಿತ ಒಪ್ಪಿರಲಿಲ್ಲ.’

‘ಯುವತಿಗೆ ಮತ್ತೆ ಸಂದೇಶ ಕಳುಹಿಸಿದ್ದ ಆರೋಪಿ, ‘ನಿನ್ನ ನಗ್ನ ಫೋಟೊಗಳನ್ನು ಕಳುಹಿಸಬೇಕು. ಇಲ್ಲದಿದ್ದರೆ, ನಿನ್ನ ತಾಯಿಯ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಎಂದು ಬೆದರಿಸಿದ್ದ. ತಾಯಿಯ ಮರ್ಯಾದೆ ಹೋದೀತೆಂದು ಹೆದರಿದ್ದ ಯುವತಿ, ತಮ್ಮ ನಗ್ನ ಫೋಟೊಗಳನ್ನು ಕಳುಹಿಸಿದ್ದರು. ಅದೇ ಫೋಟೊಗಳನ್ನು ಆರೋಪಿ ಹಲವರಿಗೆ ಕಳುಹಿಸಿದ್ದ. ಜೊತೆಗೆ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಯ ಕಿರುಕುಳದಿಂದ ಬೇಸತ್ತ ಯುವತಿ, ಪೋಷಕರಿಗೆ ವಿಷಯ ತಿಳಿಸಿದ್ದರು. ನಂತರವೇ ಠಾಣೆಗೆ ಬಂದು ದೂರು ನೀಡಿದ್ದಾರೆ. ಅಪರಿಚಿತನನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.