ADVERTISEMENT

ಪಿಇಎಸ್‌: ಬ್ಯಾಡ್ಮಿಂಟನ್‌ ಕೋರ್ಟ್‌ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 18:47 IST
Last Updated 9 ಜುಲೈ 2022, 18:47 IST
ನಗರದ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ನಿರ್ಮಿಸಿದ್ದ ಬ್ಯಾಡ್ಮಿಂಟನ್‌ ಕೋರ್ಟ್‌ ಅನ್ನು ವಾರಾಣಸಿಯ ಶಿವಾನಂದ ಆಶ್ರಮದ ಶತಾಯುಷಿ ಸ್ವಾಮಿ ಶಿವಾನಂದ ಅವರು ಉದ್ಘಾಟಿಸಿದರು
ನಗರದ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ನಿರ್ಮಿಸಿದ್ದ ಬ್ಯಾಡ್ಮಿಂಟನ್‌ ಕೋರ್ಟ್‌ ಅನ್ನು ವಾರಾಣಸಿಯ ಶಿವಾನಂದ ಆಶ್ರಮದ ಶತಾಯುಷಿ ಸ್ವಾಮಿ ಶಿವಾನಂದ ಅವರು ಉದ್ಘಾಟಿಸಿದರು   

ಬೆಂಗಳೂರು: ‘ಗುರುವು ದೇವರಿಗಿಂತ ದೊಡ್ಡವನು. ದೇವರು ಭೌತಿಕ ವಿಷಯಗಳನ್ನು ನೀಡಿದರೆ, ಗುರುಗಳು ಜ್ಞಾನವನ್ನು ನೀಡುತ್ತಾರೆ’ ಎಂದು ವಾರಾಣಸಿಯ ಶಿವಾನಂದ ಆಶ್ರಮದ ಶತಾಯುಷಿ ಸ್ವಾಮಿ ಶಿವಾನಂದ ಹೇಳಿದರು.

ನಗರದ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ನಿರ್ಮಿಸಿದ್ದ ಬ್ಯಾಡ್ಮಿಂಟನ್‌ ಕೋರ್ಟ್‌ ಉದ್ಘಾಟಿಸಿ ಅವರು ಮಾತನಾಡಿದರು.

‘ನನ್ನ ಗುರುಗಳ ಆಶೀರ್ವಾದದಿಂದ 125ನೇ ವಯಸ್ಸಿನಲ್ಲೂ ಜೀವನ ನಡೆಸುತ್ತಿದ್ದೇನೆ. ಪ್ರತಿಯೊಬ್ಬರೂ ಗುರುಗಳನ್ನು ಗೌರವಿಸಬೇಕು’ ಎಂದು ಹೇಳಿದರು.

ADVERTISEMENT

ವಿ.ವಿಯ ಕುಲಾಧಿಪತಿ ಡಾ.ಎಂ.ಆರ್‌.ದೊರೆಸ್ವಾಮಿ, ’ಕ್ರೀಡಾ ಸೌಲಭ್ಯ ಹೆಚ್ಚಿಸಲಾಗಿದೆ. ತಜ್ಞರಿಂದ ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸಲಾಗುತ್ತಿದೆ‘ ಎಂದು ಹೇಳಿದರು.

ಜಿಮ್ನ್ಯಾಷಿಯಂ, ಬಾಸ್ಕೆಟ್‌ಬಾಲ್ ಅಂಕಣ, ಬ್ಯಾಡ್ಮಿಂಟನ್‌ ಅಂಕಣ, ಟೇಬಲ್‌ ಟೆನಿಸ್‌, ಸ್ಕ್ವಾಷ್‌ ಕೋರ್ಟ್, ಯೋಗ ಸ್ಟುಡಿಯೊ, ರನ್ನಿಂಗ್ ಟ್ರ್ಯಾಕ್‌ ಮತ್ತು ಕ್ರೀಡಾ ವಿಜ್ಞಾನ ಕೇಂದ್ರವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಕುಲಪತಿಗಳಾದ ಡಾ.ಜೆ.ಸೂರ್ಯ ಪ್ರಸಾದ್‌, ಕುಲಸಚಿವರಾದ ಡಾ.ಕೆ.ಎಸ್‌.ಶ್ರೀಧರ್‌, ಕ್ರೀಡಾ ನಿರ್ದೇಶಕರಾದ ವಿನಯ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.