ADVERTISEMENT

ಒತ್ತಡ, ದುಷ್ಟತನಕ್ಕೆ ಬಲಿಯಾಗಬೇಡಿ: ವಿದ್ಯಾರ್ಥಿಗಳಿಗೆ ಜಯಕುಮಾರ್ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 20:27 IST
Last Updated 3 ಸೆಪ್ಟೆಂಬರ್ 2022, 20:27 IST
ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ಬಿ.ಟೆಕ್ ಮತ್ತು ಬಿ.ಡಿಸೈನ್‌ನ ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಕುಲಪತಿ ಡಾ.ಎಂ.ಆರ್.ದೊರೆಸ್ವಾಮಿ, ದೋಷಿ ಜಯಕುಮಾರ್, ಡಿ.ಜವಹರ್‌, ಸೂರ್ಯ ಪ್ರಸಾದ್, ಕೆ.ಎಸ್.ಶ್ರೀಧರ್ ಇದ್ದರು.
ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ಬಿ.ಟೆಕ್ ಮತ್ತು ಬಿ.ಡಿಸೈನ್‌ನ ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಕುಲಪತಿ ಡಾ.ಎಂ.ಆರ್.ದೊರೆಸ್ವಾಮಿ, ದೋಷಿ ಜಯಕುಮಾರ್, ಡಿ.ಜವಹರ್‌, ಸೂರ್ಯ ಪ್ರಸಾದ್, ಕೆ.ಎಸ್.ಶ್ರೀಧರ್ ಇದ್ದರು.   

ಬೆಂಗಳೂರು: ವಿದ್ಯಾರ್ಥಿ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಬಯಸುವವರು ತಮ್ಮ ಗೆಳೆಯರ ಒತ್ತಡ ಅರ್ಥಮಾಡಿಕೊಳ್ಳುವುದು ಹಾಗೂ ದುಷ್ಟತನಕ್ಕೆ ಬಲಿಯಾಗದಂತೆ ಎಚ್ಚರ ವಹಿಸುವುದು ಮುಖ್ಯ ಎಂದುಬ್ರಿಟಿಷ್ ಟೆಲಿಕಾಂನ ಮುಖ್ಯ ಮಾಹಿತಿ ಅಧಿಕಾರಿ ದೋಷಿ ಜಯಕುಮಾರ್ ಕಿವಿಮಾತು ಹೇಳಿದರು.

ಪಿಇಎಸ್ ವಿಶ್ವವಿದ್ಯಾಲಯದ ಬಿ.ಟೆಕ್ ಮತ್ತು ಬಿ.ಡಿಸೈನ್‌ನ ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಸಹಾಯ ಮಾಡುವ ಉತ್ತಮ ಕಾರ್ಯಕ್ಷಮತೆ ಮೈಗೂಡಿಸಿಕೊಳ್ಳಬೇಕು. ಗುರಿಗಳನ್ನು ಕೇಂದ್ರೀಕರಿಸಲು ಆಲಸ್ಯದ ವರ್ತನೆ ತೊರೆಯಬೇಕು. ಧೈರ್ಯದಿಂದ ಮುನ್ನುಗ್ಗಬೇಕು. ವೃತ್ತಿಜೀವನದಲ್ಲಿ ಯೋಜಿಸುವ ಪರಿಪಾಟ ರೂಢಿಸಿಕೊಳ್ಳಬೇಕು.ಡಿಜಿಟಲ್ ಸಂವಹನದ ಕಾಲದಲ್ಲಿರುವ ತಮ್ಮ ಮಕ್ಕಳನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಆರ್.ದೊರೆಸ್ವಾಮಿ, ‘ಪಿಇಎಸ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಕೇವಲ ಪದವಿಗಳಿಗೆ ಸೀಮಿತವಾಗಿಲ್ಲ. ವಿದ್ಯಾರ್ಥಿಗಳಲ್ಲಿ ರಾಷ್ಟ್ರ ನಿರ್ಮಾಣ ಚಟುವಟಿಕೆಯ ಪ್ರಜ್ಞೆಯನ್ನು ಬೆಳೆಸುತ್ತಿದೆ’ ಎಂದು ಹೇಳಿದರು.

ವಿಶ್ವವಿದ್ಯಾಲಯ 2014ರಿಂದ ಇಲ್ಲಿಯವರೆಗೆ ₹ 40 ಕೋಟಿ ವಿದ್ಯಾರ್ಥಿವೇತನ ವಿತರಿಸಿದೆ. ವಿಶ್ವವಿದ್ಯಾಲಯವು ಗುಣಮಟ್ಟ ಮತ್ತು ಮೌಲ್ಯಾಧಾರಿತ ಶಿಕ್ಷಣದ ಬದ್ಧತೆ ತೋರಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ ಅವರನ್ನು ಅನುಸರಿಸಬೇಕು. ಅದಕ್ಕಾಗಿ, ಇಬ್ಬರ ಜೀವನಚರಿತ್ರೆಯನ್ನು ಪಠ್ಯವಿಷಯವಾಗಿ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಮಕುಲಪತಿ ಡಿ.ಜವಹರ್ ಅವರು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಉಪಕುಲಪತಿ ಜೆ.ಸೂರ್ಯ ಪ್ರಸಾದ್, ಸಿಇಒ ಅಜೋಯ್ ಕುಮಾರ್, ಕುಲಸಚಿವ ಕೆ.ಎಸ್.ಶ್ರೀಧರ್, ವಿಜ್ಞಾನ ಮತ್ತು ಮಾನವಿಕ ವಿಭಾಗದ ಅಧ್ಯಕ್ಷ ಎಸ್.ರಾಧಾಕೃಷ್ಣನ್ ಅವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.