ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯದಲ್ಲಿನ ವೃತ್ತಿ ಶಿಕ್ಷಣ ಮತ್ತು ಮ್ಯಾನೇಜ್‌ಮೆಂಟ್ ಕೋರ್ಸ್ ಸೀಟುಗಳ ಭರ್ತಿಗಾಗಿ ನಡೆಸುವ ಪಿಇಎಸ್–ಎಸ್‌ಎಟಿ(ಸ್ಕಾಲಸ್ಟಿಕ್ ಅಪ್ಟಿಟ್ಯೂಡ್ ಟೆಸ್ಟ್) ಫಲಿತಾಂಶದಲ್ಲಿ ರ‍್ಯಾಂಕ್ ಗಳಿಸಿದವರ ಪಟ್ಟಿಯನ್ನು ಭಾನುವಾರ ಪ್ರಕಟಿಸಲಾಯಿತು.
ಪರೀಕ್ಷೆ ಬರೆದ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆಫಲಿತಾಂಶವನ್ನು ಸಂದೇಶದ ಮೂಲಕ ಕಳುಹಿಸಲಾಯಿತು. ವಿಶ್ವವಿದ್ಯಾಲಯದ ಜಾಲತಾಣದಲ್ಲೂ (https://www.pes.edu/) ಫಲಿತಾಂಶ ತಿಳಿಯಲು ಆಯ್ಕೆ ನೀಡಲಾಗಿದೆ.
ಈ ಪ್ರವೇಶ ಪರೀಕ್ಷೆಯಲ್ಲಿ ಇಂದಿರಾನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ನಿಹಾಲ್ ಜಾನ್ ಜಾರ್ಜ್ ಮೊದಲ ರ‍್ಯಾಂಕ್ ಗಳಿಸಿದ್ದಾರೆ. ಎರಡನೇ ರ‍್ಯಾಂಕ್‌ಗೆ ಸೇಂಟ್ ಜೋಸೆಫ್ ಹೈಸ್ಕೂಲ್‌ನ ಆರ್.ಶ್ರುತಿಭಾಜನರಾಗಿದ್ದಾರೆ. ಮೂರನೇ ರ‍್ಯಾಂಕ್‌ನೆಹರು ಸ್ಮಾರಕ ವಿದ್ಯಾಲಯದ ನಕುಲ ನೀರಾಜೆ ಪಾಲಾಗಿದೆ.
‘ಈ ಪರೀಕ್ಷೆಯಲ್ಲಿ ರ‍್ಯಾಂಕಿಂಗ್ ಗಳಿಸಿದ ವಿದ್ಯಾರ್ಥಿಗಳಿಗೆ ಜೂನ್ ಆರಂಭದಿಂದ ಕೌನ್ಸೆಲಿಂಗ್ ನಡೆಸುತ್ತೇವೆ. ಮೆರಿಟ್ ಆಧಾರದ ಮೇಲೆ ಎಂಜಿನಿಯರಿಂಗ್, ಎಂಬಿಎ, ಕಾನೂನು, ಆರ್ಟಿಟೆಕ್ಚರ್, ಡಿಸೈನಿಂಗ್, ಫಾರ್ಮಸಿ, ಹೋಟೆಲ್ ಮ್ಯಾನೇಜ್‌ಮೆಂಟ್, ಬಿ.ಕಾಂ. ಕೋರ್ಸ್‌ಗಳ ಸೀಟುಗಳನ್ನು ಹಂಚಿಕೆ ಮಾಡುತ್ತೇವೆ’ ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್.ದೊರೆಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಶಿಕ್ಷಣ ಸಂಸ್ಥೆಯಲ್ಲಿ ಐಐಟಿ ಮಾದರಿಯ ಪಠ್ಯಕ್ರಮ ರೂಪಿಸಿಕೊಂಡಿದ್ದೇವೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಎನ್‌ಆರ್ ರಾವ್ ಮತ್ತು ಎಂಆರ್‌ಡಿ ವಿದ್ಯಾರ್ಥಿ ವೇತನಗಳನ್ನು ನೀಡುತ್ತಿದ್ದೇವೆ. ಇದಕ್ಕಾಗಿ ಪ್ರತಿ ಸೆಮಿಸ್ಟರ್‌ನಲ್ಲಿ ₹ 3 ಕೋಟಿ ವ್ಯಯಿಸುತ್ತಿದ್ದೇವೆ’ ಎಂದು ಹೇಳಿದರು.
*
ಜೆಇಇ ಅಡ್ವಾನ್ಸ್‌ನಲ್ಲಿ ಉತ್ತಮ ರ‍್ಯಾಂಕ್ ಬಂದರೆ ಐಐಟಿ ಮದ್ರಾಸ್ ಅಥವಾ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಅಧ್ಯಯನಕ್ಕೆ ಸೇರುತ್ತೇನೆ.
ನಿಹಾಲ್ ಜಾನ್ ಜಾರ್ಜ್, 1ನೇ ರ‍್ಯಾಂಕ್
*
ದಿನಾಲೂ ನಾಲ್ಕು ತಾಸು ಆಸಕ್ತಿಯಿಂದ ಓದಿದ್ದರಿಂದ ರ‍್ಯಾಂಕ್ ಬಂದಿದೆ. ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಅಧ್ಯಯನಕ್ಕೆ ಸೇರುತ್ತೇನೆ.
ಆರ್.ಶ್ರುತಿ, 2ನೇ ರ‍್ಯಾಂಕ್
*
ವಿಶ್ವವಿದ್ಯಾಲಯದಿಂದ ರಸ್ತೆ ಅಭಿವೃದ್ಧಿ
‘ಹೊಸಕೆರೆಹಳ್ಳಿಯ ಮೇಲ್ಸೇತುವೆಯಿಂದ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಅಂದಾಜು 1 ಕಿ.ಮೀ. ಉದ್ದದ ಹೊರವರ್ತುಲ ರಸ್ತೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸುತ್ತೇವೆ’ ಎಂದು ಎಂ.ಆರ್.ದೊರೆಸ್ವಾಮಿ ತಿಳಿಸಿದರು.
‘ಸಾಮಾಜಿಕ ಹೊಣೆಗಾರಿಕೆಯಂದು ಭಾವಿಸಿ ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡು ರಸ್ತೆಯ ಇಕ್ಕೆಲಗಳಲ್ಲಿನ ಪಾದಚಾರಿ ಮಾರ್ಗವನ್ನು ಸರಿಪಡಿಸುತ್ತೇವೆ. ಗಿಡಗಳನ್ನು ಬೆಳೆಸಿ ಹಸಿರು ವಾತಾವರಣ ನಿರ್ಮಿಸುತ್ತೇವೆ. ಅಲ್ಲಲ್ಲಿ ಕಲ್ಲು ಬೆಂಚುಗಳಲ್ಲಿ ಹಾಕಿ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಡುತ್ತೇವೆ’ ಎಂದು ಅವರು ತಿಳಿಸಿದರು.
*
ಅಂಕಿ–ಅಂಶ
16,200:ಪಿಇಎಸ್–ಎಸ್‌ಎಟಿ ಆನ್‌ಲೈನ್ ಪರೀಕ್ಷೆ ಬರೆದವರು
35 :ಪರೀಕ್ಷೆ ನಡೆದ ಕೇಂದ್ರಗಳು
2,166 :ಪಿಇಎಸ್ ವಿಶ್ವವಿದ್ಯಾಲಯದಲ್ಲಿನ ಒಟ್ಟು ಎಂಜಿನಿಯರಿಂಗ್ ಸೀಟುಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.