ADVERTISEMENT

ಪಿಜಿಸಿಇಟಿ: 21ರೊಳಗೆ ಕಾಲೇಜು ಪ್ರವೇಶ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 21:45 IST
Last Updated 16 ನವೆಂಬರ್ 2024, 21:45 IST
<div class="paragraphs"><p>ಕರ್ನಾಟಕ ಪರೀಕ್ಷಾ ಪ್ರಾಧಿಕಾರ</p></div>

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

   

ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್‌, ಎಂ.ಆರ್ಕ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಚಾಯ್ಸ್‌ಗೆ ಇದೇ 19ರವರೆಗೆ ಅವಕಾಶ ನೀಡಿದೆ.

ADVERTISEMENT

ಅಭ್ಯರ್ಥಿಗಳು ತಮ್ಮ ಪೋಷಕರ ಜತೆ ಚರ್ಚಿಸಿ, ಸೂಕ್ತ ಚಾಯ್ಸ್‌ ದಾಖಲಿಸಬೇಕು. ಚಾಯ್ಸ್ 1 ಮತ್ತು 2 ಆಯ್ಕೆ‌ ಮಾಡಿದವರು ಇದೇ 20ರೊಳಗೆ ಶುಲ್ಕ ಪಾವತಿ ಮಾಡಿ, 21ರ ಒಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ತಿಳಿಸಿದ್ದಾರೆ.

ಕಾಲೇಜುಗಳಿಗೆ ಹೋಗುವಾಗ ಕಡ್ಡಾಯವಾಗಿ ಮೂಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು.

ಮೂಲ ದಾಖಲೆಗಳು ಇಲ್ಲದಿದ್ದರೆ ಕಾಲೇಜುಗಳಲ್ಲಿ ಪ್ರವೇಶ ಮಾಡಿಸಿಕೊಳ್ಳುವುದಿಲ್ಲ ಎಂದೂ ಅವರು
ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.