ADVERTISEMENT

ಬೆಂಗಳೂರು: ಆ.10ರಿಂದ ಛಾಯಾಚಿತ್ರಗಳ ಪ್ರದರ್ಶನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 15:27 IST
Last Updated 7 ಆಗಸ್ಟ್ 2024, 15:27 IST
<div class="paragraphs"><p>ಛಾಯಾಚಿತ್ರಗಳ ಪ್ರದರ್ಶನ&nbsp;</p></div>

ಛಾಯಾಚಿತ್ರಗಳ ಪ್ರದರ್ಶನ 

   

ಬೆಂಗಳೂರು: ಯೂತ್ ಫೋಟೋಗ್ರಾಫಿಕ್ ಸೊಸೈಟಿಯಿಂದ (ವೈಪಿಎಸ್‌) ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಇದೇ 10 ಮತ್ತು 11ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ‘ಸ್ಕ್ವೇರ್‌ ಇಟ್‌ ಅಪ್‌’ ಹೆಸರಿನಲ್ಲಿ ವೈಪಿಎಸ್‌ ಸದಸ್ಯರ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.

ಆಗಸ್ಟ್‌ 10ರಂದು ಮಧ್ಯಾಹ್ನ 3ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಡಾ. ಅಜಿತ್‌ ಹುಯಿಲಗೋಳ ಅವರು ವಿಶ್ವದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ತೆಗೆದಿರುವ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಆಗಸ್ಟ್‌ 11ರಂದು ಆಹಾರ ಛಾಯಾಚಿತ್ರ ಸ್ಪರ್ಧೆ ನಡೆಯಲಿದ್ದು, ವಿವಿಧ ಆಹಾರ ಪದಾರ್ಥಗಳ ಛಾಯಾಚಿತ್ರಗಳನ್ನು ತೆಗೆದು ಆಯೋಜಕರೊಂದಿಗೆ ಹಂಚಿಕೊಳ್ಳಬೇಕು. ಉತ್ತಮ ಛಾಯಾಚಿತ್ರಗಳಿಗೆ ಬಹುಮಾನಗಳನ್ನು ನೀಡಲಾಗುವುದು. ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ ಛಾಯಾಚಿತ್ರಗಳ ಪ್ರದರ್ಶನ ಇರಲಿದೆ. ಈ ಪ್ರದರ್ಶನ ಹಾಗೂ ಸ್ಪರ್ಧೆ ಉಚಿತವಾಗಿದ್ದು, ಎಲ್ಲರೂ ಭಾವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

ADVERTISEMENT

ಮಾಹಿತಿಗೆ: www.ypsbengaluru.comಗೆ ಭೇಟಿ ನೀಡಿ ಅಥವಾ 95139 77257ಗೆ ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.