ADVERTISEMENT

ಪಿಕ್ಚರ್‌ ಪ್ಯಾಲೇಸ್‌: ನೀ ಬಂದು ನಿಂದಿಲ್ಲಿ...

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 23:10 IST
Last Updated 25 ಅಕ್ಟೋಬರ್ 2024, 23:10 IST
<div class="paragraphs"><p>ಬೆಂಗಳೂರಿನ ಪೋಟರಿ ಟೌನ್ ನಲ್ಲಿ ಮಾರಾಟಕ್ಕೆ ಸಿದ್ಧವಾದ ದೀಪ </p></div>

ಬೆಂಗಳೂರಿನ ಪೋಟರಿ ಟೌನ್ ನಲ್ಲಿ ಮಾರಾಟಕ್ಕೆ ಸಿದ್ಧವಾದ ದೀಪ

   

ಪ್ರೀತಿಯ ಕರೆ ಕೇಳಿ, ಆತ್ಮನ ಮೊರೆ ಕೇಳಿ.. ನೀ ಬಂದು ನಿಂದಿಲ್ಲಿ ದೀಪ ಹಚ್ಚ.. ಹಾಡು ಮನದೊಳಗೆ ಒಡಮೂಡುವಂತೆ ಹಣತೆಗಳ ಸಾಲು ಈಗ ಎಲ್ಲೆಲ್ಲೋ. ಮಿದುವಾದ ಜೇಡಿ ಮಣ್ಣನ್ನು ಹದಗೊಳಿಸಿ, ಹಣತೆಯಾಕಾರಕ್ಕೆ ತರುವಾಗ ಕುಂಬಾರಣ್ಣ, ಹಾಲುಬಾನ ಉಂಡು ಮಣ್ಣು ತುಳಿದ ಹಾಡೂ ನೆನಪಾಗುತ್ತದೆ. 

ಬೆಳಕಿನ ಕುಡಿಯನ್ನು ಬೆಳಗಿಸುವ ಈ ಹಣತೆ ಮಣ್ಣಿಂದ, ಆಕಾರ ಪಡೆದು, ಸೂರ್ಯನಿಗೆ ಮೈ ಒಡ್ಡಿ, ಒಣಗಿಸಿಕೊಂಡು, ಅಗ್ನಿಪರೀಕ್ಷೆಗೆ ಇಳಿಯುವಂತೆ ಭಟ್ಟಿಯಲ್ಲಿ ಸುಟ್ಟು, ಗಟ್ಟಿಯಾಗಿ ಬೆಳಕು ನೀಡಲು ಸಿದ್ಧವಾಗುತ್ತವೆ, ಬದುಕಿನ ಪಾಠ ಹೇಳುವಂತೆ.

ADVERTISEMENT

ಬದುಕಿನಲ್ಲಿ ಪರಿಸ್ಥಿತಿಯು ನಮ್ಮನ್ನು ತುಳಿದಷ್ಟೂ ಮಿದುವಾಗಬೇಕು. ಸುಟ್ಟಷ್ಟೂ ಗಟ್ಟಿಯಾಗಬೇಕು. ಮಿದುವಾಗುತ್ತ, ಗಟ್ಟಿಯಾಗುತ್ತ, ನಮ್ಮನ್ನೇ ದಹಿಸಿಕೊಂಡರೂ ಬೆಳಗುವ ದೀಪವಾಗಬೇಕು. ಬೆಂಕಿಗೆ ಕಿಡಿಯಾಗದೇ ಕುಡಿಯಾಗಿ ಬೆಳಗಬೇಕು ಎಂಬ ಪಾಠ ನೀಡುವ ಹಣತೆಯನ್ನು ತಯಾರಿಸುವ ಪ್ರತಿ ಹಂತವನ್ನೂ ಪ್ರಜಾವಾಣಿಯ ಫೋಟೊ ಜರ್ನಲಿಸ್ಟ್‌ ಎಂ.ಎಸ್‌. ಮಂಜುನಾಥ್‌ ಸೆರೆ ಹಿಡಿದಿದ್ದಾರೆ. ಹೀಗೆ ಸಿದ್ಧವಾದ ಹಣತೆಗಳೆಲ್ಲವೂ ಹಬ್ಬದಲ್ಲಿ ನಿಮ್ಮನೆಯಂಗಳವನ್ನು, ಮನವನ್ನೂ ಬೆಳಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.