ADVERTISEMENT

ರೈಲು ನಿಲ್ದಾಣಕ್ಕೆ ಚಿತ್ರ –ಚಿತ್ತಾರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 19:33 IST
Last Updated 28 ಫೆಬ್ರುವರಿ 2019, 19:33 IST
ಬೆಂಗಳೂರು ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ಗಂಜೀಫಾ ಕಲೆಗಳ ಅಲಂಕಾರ
ಬೆಂಗಳೂರು ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ಗಂಜೀಫಾ ಕಲೆಗಳ ಅಲಂಕಾರ   

ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವನ್ನು ಚಿತ್ರ– ಚಿತ್ತಾರಗಳಿಂದ ಅಲಂಕರಿಸಲಾಗಿದೆ. ನಿಲ್ದಾಣ ಪ್ರವೇಶಿಸುವ ಪ್ರಯಾಣಿಕರಿಗೆ ಆಹ್ಲಾದಕರ ಅನುಭವ ನೀಡುವ ನಿಟ್ಟಿನಲ್ಲಿ ಇಲಾಖೆಯು ಈ ಕ್ರಮ ಕೈಗೊಂಡಿದೆ.

ಸ್ಥಳೀಯ ಕಲಾವಿದರ ಮೂಲಕ ಇಲ್ಲಿ ಕಲಾಕೃತಿಗಳನ್ನು ರಚಿಸಲಾಗಿದೆ. ಮೈಸೂರು ಗಂಜೀಫಾ ಚಿತ್ರಕಲೆ, ಉತ್ತರ ಕರ್ನಾಟಕದ ‘ಚಿತ್ತಾರ’ ಕಲಾ ಕೃತಿಗಳನ್ನು ನಿಲ್ದಾಣದ ಪ್ರಮುಖ ಪ್ರದೇಶಗಳಲ್ಲಿ ಬಿಡಿಸಲಾಗಿದೆ.

ಚಿತ್ತಾರ ಕಲೆಯಲ್ಲಿ ರಾಜ್ಯದ ಗ್ರಾಮೀಣ ಜನಜೀವನವನ್ನು ಚಿತ್ರಿಸ ಲಾಗಿದೆ. ಪ್ಲಾಟ್‌ ಫಾರಂ 1ರಲ್ಲಿ ಸಾಂಪ್ರ
ಡದಾಯಿಕ ಗೊಂಬೆ ಕಲೆಗಳ ಕೃತಿಗಳನ್ನೂ ಕಾಣಬಹುದು. ಉತ್ತರ ಕರ್ನಾಟಕದ ಜನಜೀವನವನ್ನೂ ಇಲ್ಲಿ ಚಿತ್ರಿಸಲಾಗಿದೆ. ಹವಾನಿಯಂತ್ರಿತ ಭವನದಲ್ಲಿ ರಾಜ್ಯದ ವಿವಿಧ ಸಾಂಪ್ರದಾಯಿಕ ನೃತ್ಯ ಪ್ರಕಾರಗಳ ಚಿತ್ರಗಳನ್ನೂ ಕಾಣಬಹುದು.

ADVERTISEMENT

ಬೆಂಗಳೂರು ಅರಮನೆಯ ಮೂರು ಆಯಾಮಗಳ ಕಲಾಕೃತಿಯನ್ನು ಮುಖ್ಯ ಪ್ರಾಂಗಣದಲ್ಲಿ ಇರಿಸಲಾಗಿದೆ. ವಿಶೇಷ ದೀಪಾಲಂಕಾರವೂ ಈ ಕೃತಿಗೆ ಇದೆ. ಸ್ಥಳೀಯ ಕಲಾವಿದರ ನೆರವಿನೊಂದಿಗೆ ಸೃಷ್ಟಿ ಆರ್ಟ್ಸ್‌ನ ಸುಮಂಗಲಾ ಭಟ್‌ ಅವರು ಇಲ್ಲಿ ಕಲಾಕೃತಿಗಳನ್ನು ರಚಿಸಿದ್ದಾರೆ. ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವೂ ಹಲವು ಎನ್‌ಜಿಒ ಮತ್ತು ಕಾರ್ಪೊರೇಟ್‌ ಸಂಸ್ಥೆಗಳೂ ಈ ಕಾರ್ಯದಲ್ಲಿ ತೊಡಗಿವೆ. ಸಬ್‌ವೇಯನ್ನು ವರ್ಲಿ, ಚಿತ್ತಾರ ಕಲೆಗಳಿಂದ, ನಿಲ್ದಾಣದ ಗೋಡೆಗಳನ್ನು ಕಲಾಂಕಾರಿ ಕಲೆ, ತಂಜಾವೂರು ಶೈಲಿಯ ಕಲಾಕೃತಿಗಳಿಂದ ಅಲಂಕರಿಸಲಾಗಿದೆ.

ಬೆಂಗಳೂರು ದಂಡು, ಹಿಂದೂಪುರ, ರಾಮನಗರ ನಿಲ್ದಾಣಗಳಲ್ಲೂ ಇದೇ ರೀತಿ ಕಲಾಕೃತಿಗಳ ಅಲಂಕಾರ ಮಾಡಲಾಗುವುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.