ADVERTISEMENT

ಬೆಂಗಳೂರು | ನಕ್ಷೆ ಉಲ್ಲಂಘನೆ: ಅನಧಿಕೃತವಾಗಿ ನಿರ್ಮಿಸಿದ 2 ಅಂತಸ್ತು ತೆರವು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 15:20 IST
Last Updated 16 ನವೆಂಬರ್ 2024, 15:20 IST
ವಾಜರಹಳ್ಳಿಯಲ್ಲಿ ಅನಧಿಕೃತ ಕಟ್ಟಡವನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು
ವಾಜರಹಳ್ಳಿಯಲ್ಲಿ ಅನಧಿಕೃತ ಕಟ್ಟಡವನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು   

ಬೆಂಗಳೂರು: ರಾಜರಾಜೇಶ್ವರಿನಗರ ವಲಯದ ವಾಜರಹಳ್ಳಿಯಲ್ಲಿ ನಕ್ಷೆ ಮಂಜೂರಾತಿಗಿಂತ ಹೆಚ್ಚುವರಿಯಾಗಿ ಅನಧಿಕೃತವಾಗಿ ನಿರ್ಮಿಸಿದ ಕಟ್ಟಡದ ಎರಡು ಅಂತಸ್ತುಗಳ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಸಿಬ್ಬಂದಿ ಶನಿವಾರ ಆರಂಭಿಸಿದ್ದಾರೆ.

ವಾಜರಹಳ್ಳಿಯಲ್ಲಿ ಸ್ವತ್ತಿನ ಸಂಖ್ಯೆ 271ರಲ್ಲಿ ಮಾಲೀಕರಾದ ಮದನ್ ದೇವಾಸಿ ಬಿ ಮತ್ತು ಮಹೇಂದ್ರ ದೇವಾಸಿ ಅವರು 30 x 40 ಅಡಿ ನಿವೇಶನದಲ್ಲಿ ಪಾಲಿಕೆ ಮಂಜೂರು ಮಾಡಿರುವ ನಕ್ಷೆಗೆ ವಿರುದ್ಧವಾಗಿ ಮೂರು ಮತ್ತು ನಾಲ್ಕನೇ ಅಂತಸ್ತನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದರ ತೆರವು ಕಾರ್ಯವನ್ನು ಆರಂಭಿಸಲಾಗಿದೆ ಎಂದು ವಲಯ ಆಯುಕ್ತರಾದ ಬಿ.ಸಿ ಸತೀಶ್ ತಿಳಿಸಿದ್ದಾರೆ.

ನಾಲ್ಕು ಬಾರಿ ನೋಟಿಸ್‌ ಜಾರಿ ಮಾಡಿದರೂ ಮಾಲೀಕರು, ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡದ ಭಾಗಗಳನ್ನು ತೆರವುಗೊಳಿಸಿರಲಿಲ್ಲ. ಹೀಗಾಗಿ ಬಿಬಿಂಪಿ ವತಿಯಿಂದಲೇ ತೆರವು ಕಾರ್ಯ ನಡೆಯುತ್ತಿದೆ. ಈ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ತೆರವುಗೊಳಿಸಲು ತಗುಲಿದ ವೆಚ್ಚವನ್ನು ಕಟ್ಟಡ ಮಾಲೀಕರಿಂದ ವಸೂಲಿ ಮಾಡಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.