ADVERTISEMENT

ಪರಿಸರ ಸಮತೋಲನಕ್ಕಾಗಿ ಗಿಡ ನೆಡಿ: ನಿರ್ಮಲಾನಂದನಾಥ ಶ್ರೀ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2024, 15:35 IST
Last Updated 3 ನವೆಂಬರ್ 2024, 15:35 IST
ಶಿವಗಂಗೆಯ ಹಿಪ್ಪೆ ವನದಲ್ಲಿ ಗಿಡ ನೆಟ್ಟು ನೀರೆರೆದ ನಿರ್ಮಲಾನಂದ ಸ್ವಾಮೀಜಿ
ಶಿವಗಂಗೆಯ ಹಿಪ್ಪೆ ವನದಲ್ಲಿ ಗಿಡ ನೆಟ್ಟು ನೀರೆರೆದ ನಿರ್ಮಲಾನಂದ ಸ್ವಾಮೀಜಿ   

ದಾಬಸ್ ಪೇಟೆ: ‘ಮನುಷ್ಯನಿಗೆ ಜೀವಿಸಲು ಬೇಕಾಗಿರುವ ಪ್ರಾಣವಾಯು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅದಕ್ಕಾಗಿ ಹೆಚ್ಚು ಗಿಡಗಳನ್ನು ನೆಡಬೇಕು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ಶಿವಗಂಗೆಯ ಹಿಪ್ಪೆ ವನದಲ್ಲಿ ಏರ್ಪಡಿಸಿದ್ದ ಸಸಿ ನೆಡುವ ಹಾಗೂ ಜೈವಿಕ ಉದ್ಯಾನ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿಡ ನೆಟ್ಟು ಅವರು ಮಾತನಾಡಿದರು.

‘70ರ ದಶಕದಲ್ಲಿ ನೀರಿನ ಬಾಟಲ್‌ಗಳು ಬಂದವು. ಇವತ್ತು ನೀರಿನ ಬಾಟಲ್‌ ಎಲ್ಲೆಡೆ ಆವರಿಸಿಕೊಂಡಿದೆ. ಅದರಂತೆ ಮುಂದಿನ ದಿನಗಳಲ್ಲಿ ಮಕ್ಕಳು ಶಾಲಾ ಬ್ಯಾಗ್‌ಗಳನ್ನು ಬೆನ್ನಿಗೆ ಹಾಕಿಕೊಳ್ಳುವಂತೆ, ಮನುಷ್ಯರು ಆಮ್ಲಜನಕದ ಸಿಲಿಂಡರ್‌ ಹಾಕಿಕೊಂಡು ಓಡಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

ಜನ್ಮದಿನ, ಮದುವೆ ವಾರ್ಷಿಕೋತ್ಸವ ಸಹಿತ ವಿವಿಧ ಕಾರ್ಯಕ್ರಮಗಳನ್ನು ಎಲ್ಲರೂ ವಿಭಿನ್ನವಾಗಿ ಆಚರಣೆ ಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಗಿಡಗಳನ್ನು ನೆಟ್ಟು, ಪೋಷಣೆ ಮಾಡಿ ಬೆಳೆಸಿದರೆ ಶುಭ ಕಾರ್ಯಕ್ಕೂ ಬೆಲೆ, ಪರಿಸರಕ್ಕೂ ಕೊಡುಗೆ ನೀಡಿದಂತೆ ಆಗುತ್ತದೆ’ ಎಂದು ಹೇಳಿದರು.

ವಿಜಯನಗರ ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.