ಬೆಂಗಳೂರು:ಒಂದು ಕಡೆ ಬಿಬಿಎಂಪಿ, ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸುತ್ತಿದ್ದರೆ, ಇನ್ನೊಂದು ಕಡೆ, ಅದೇ ಮಾರ್ಗದಒತ್ತುವರಿ ಎಗ್ಗಿಲ್ಲದೆ ನಡೆಯುತ್ತಿದೆ.ಇದರಿಂದ ‘ದಾರಿ ಯಾವುದಯ್ಯ ನಡೆಯಲು’ ಎಂದು ಪ್ರಶ್ನಿಸುವ ಸ್ಥಿತಿ ಎದುರಾಗಿದೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಪಂಗಿರಾಮನಗರದ ನಾಲ್ಕನೇ ಹಂತದಲ್ಲಿರಸ್ತೆಯ ಎರಡು ಬದಿಗಳ ಮಾರ್ಗಗಳು ವಾಹನ ನಿಲುಗಡೆ ಸ್ಥಳಗಳಾಗಿ ಮತ್ತು ಖಾಸಗಿ ಆಸ್ತಿಯಾಗಿ ಪರಿವರ್ತಿತವಾಗಿವೆ. ಆದ್ದರಿಂದಇಲ್ಲಿಪಾದಚಾರಿ ಮಾರ್ಗಗಳು ನೋಡಲೂ ಸಿಗುವುದಿಲ್ಲ. ರಸ್ತೆಯಲ್ಲಿ ವಾಹನಗಳ ಮಧ್ಯೆ ನಡೆಯುವುದು ನಿವಾಸಿಗಳಿಗೆಅನಿವಾರ್ಯ ಆಗಿದೆ. ಹೀಗೆ ರಸ್ತೆ ಮೇಲೆ ನಡೆಯುವಾಗ ವಾಹನಗಳಿಗೆ ಅಡ್ಡ ಹೋಗಿಸವಾರರಿಂದ ಬೈಸಿಕೊಳ್ಳುವುದೂ ಸಾಮಾನ್ಯವಾಗಿದೆ.
ಈ ಪ್ರದೇಶದಲ್ಲಿ ಹಲವುಕಟ್ಟಡ ಕಾಮಗಾರಿಗಳು ನಡೆಯುತ್ತಿವೆ. ಅವುಗಳನಿರ್ಮಾಣಕ್ಕೆ ತಂದ ಮರಳು, ಸಿಮೆಂಟ್ ಹಾಗೂ ಜಲ್ಲಿಯನ್ನು ಪಾದಚಾರಿಮಾರ್ಗದ ಮೇಲೆಹಾಕಲಾಗಿದೆ. ಪರಿಣಾಮ,ಮಾರ್ಗಗಳು ಬಂದ್ ಆಗಿವೆ.
ವ್ಯಾಪಾರಿಗಳ ದರ್ಬಾರ್: ಪಾದಚಾರಿ ಮಾರ್ಗಗಳನ್ನು ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ನಿರ್ಮಿಸಿದ್ದಾರೆ. ಈ ಒತ್ತುವರಿಯಲ್ಲಿಬೀದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳ ಪಾಲೂ ಇದೆ. ರಸ್ತೆಗೆ ಹೊಂದಿಕೊಂಡಂತಿರುವಬಿಇಎಂಎಲ್ ಕಚೇರಿ ಮುಂಭಾಗದ ಮಾರ್ಗದ ಮೇಲೆಎಳನೀರು ಮಾರಾಟ ಮಾಡಲಾಗುತ್ತಿದೆ. ಭದ್ರತಾ ಸಿಬ್ಬಂದಿ ಕೂರಲು ಪಾದಚಾರಿ ಮಾರ್ಗದ ಮೇಲೆ ಬಿಇಎಂಎಲ್‌ತಾತ್ಕಾಲಿಕ ತಂಗುದಾಣವನ್ನು ನಿರ್ಮಿಸಿದೆ.
ಫುಟ್‌ಪಾತ್ ಕಬಳಿಸಿದ ಟ್ರಾನ್ಸ್‌ಫಾರ್ಮರ್: ಬೆಸ್ಕಾಂಫುಟ್‌ಪಾತ್ ಮೇಲೆ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಿದ್ದು, ಅದರ ಸುತ್ತ ತಂತಿಬೇಲಿ ಹಾಕಿದೆ. ಆದ್ದರಿಂದಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಆತಂಕದಲ್ಲಿಯೇ ನಡೆಯಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ.
ಒಡೆದ ಫುಟ್‌ಪಾತ್: ಪಾದಚಾರಿ ಮಾರ್ಗಗಳು ಒಡೆದು ಹೋಗಿವೆ. ಸುಸ್ಥಿತಿಯಲ್ಲಿದ್ದ ಮಾರ್ಗಗಳನ್ನು ವ್ಯಾಪಾರಿಗಳು ದುಸ್ಥಿತಿಗೆ ತಂದಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂಭಾಗದ ಒಳಚರಂಡಿ ಕಲ್ಲುಗಳು ಮೇಲಕ್ಕೆದ್ದು, ಅಪಾಯ ತಂದೊ
ಡ್ಡಲು ಕಾಯುತ್ತಿವೆ.ರಸ್ತೆಯು ಇಕ್ಕಟ್ಟಾಗಿರುವುದರಿಂದದಟ್ಟಣೆ ಉಂಟಾದಾಗ ಕೆಲವರು ವಾಹನಗಳನ್ನು ಪಾದಚಾರಿ ಮಾರ್ಗದ ಮೇಲೆ ಹತ್ತಿಸಿಕೊಂಡು ಹೋಗುತ್ತಾರೆ.
ಕಸದ ಸಮಸ್ಯೆಯೂ ಜನರನ್ನು ಬಾಧಿಸುತ್ತಿದೆ. ಇಲ್ಲಿಯ ಪಾಳು ಮನೆಯೊಂದರಲ್ಲಿ ಕಸ ಸುರಿಯಲಾಗುತ್ತದೆ. ಗಾಳಿ ಬಂದಾಗ ಅದು ರಸ್ತೆಗೆ ಜಾರುತ್ತದೆ. ದುರ್ವಾಸನೆ ಜನರ ನೆಮ್ಮದಿಯನ್ನು ಕಸಿಯುತ್ತಿದೆ.
‘ಇದ್ದ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಫುಟ್‌ಪಾತ್ ಮೇಲೆಯೇ ವಾಹನ ನಿಲ್ಲಿಸಲಾಗುತ್ತಿದೆ. ಕೂಗಳತೆ ದೂರದಲ್ಲಿ ಪೊಲೀಸ್ ಠಾಣೆ ಇದ್ದರೂ ಇಲ್ಲದಂತಾಗಿದೆ’ ಎಂದು ಸ್ಥಳೀಯರೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಾರೆ.
***
ಪಾದಚಾರಿ ನಾಪತ್ತೆಯಾಗಿದ್ದರಿಂದ ರಸ್ತೆ ಮೇಲೆಯೇ ನಡೆಯಬೇಕು. ಹೀಗೆ ನಡೆಯುವಾಗ ಅನಾಹುತಗಳು ಸಂಭವಿಸಿವೆ.
-ವಿಜಯಕುಮಾರ್, ಸಂಪಂಗಿರಾಮಗರ ನಿವಾಸಿ
***
ಪಾದಚಾರಿ ಮಾರ್ಗದ ಮೇಲೆ ವಾಹನ ನಿಲ್ಲಿಸುವುದನ್ನು ಪೊಲೀಸರ ಗಮನಕ್ಕೆ ತಂದು ತೆರವುಗೊಳಿಸುತ್ತೇವೆ.
-ಆರ್, ವಸಂತಕುಮಾರ್, ಸಂಪಂಗಿರಾಮನಗರ ಪಾಲಿಕೆ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.