ಬೆಂಗಳೂರು: 14ನೇ ಆವೃತ್ತಿಯ ಏರೋ ಇಂಡಿಯಾ ಶೊಗೆ ಯಲಹಂಕ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಆಗಸವು ನ್ಯೂ ಇಂಡಿಯಾದ ಸಾಮರ್ಥ್ಯಕ್ಕೆ ಸಾಕ್ಷಿಯಾಗುತ್ತಿದೆ. ಇಂದು ಭಾರತವು ಕೇವಲ ಜಾಗತಿಕ ರಕ್ಷಣಾ ಉತ್ಪನ್ನಗಳ ಮಾರುಕಟ್ಟೆಯಾಗಿಲ್ಲ. ಬದಲಾಗಿ, ಸಮರ್ಥ ರಕ್ಷಣಾ ಸಹಭಾಗಿತ್ವದ ದೇಶವಾಗಿದೆ ಎಂದು ಮೋದಿ ಹೇಳಿದರು.
#AeroIndia ಹೊಸ ಭಾರತದ ಹೊಸ ವಿಧಾನವನ್ನು ಪ್ರತಿಬಿಂಬಿಸುತ್ತದೆ. ಅದನ್ನು ಕೇವಲ ಪ್ರದರ್ಶನ ಎಂದು ಪರಿಗಣಿಸುತ್ತಿದ್ದ ಕಾಲವೊಂದಿತ್ತು. ಕಳೆದ ಕೆಲವು ವರ್ಷಗಳಲ್ಲಿ, ದೇಶವು ಈ ಗ್ರಹಿಕೆಯನ್ನು ಬದಲಾಯಿಸಿದೆ. ಇಂದು, ಇದು ಕೇವಲ ಪ್ರದರ್ಶನವಲ್ಲ. ಭಾರತದ ಶಕ್ತಿಯಾಗಿದೆ. ಇದು ಭಾರತೀಯ ರಕ್ಷಣಾ ಉದ್ಯಮದ ವ್ಯಾಪ್ತಿ ಮತ್ತು ಆತ್ಮ ವಿಶ್ವಾಸದ ಪ್ರತೀಕವಾಗಿದೆ ಎಂದು ಅವರು ಹೆಲಿದರು.
ಇಂದು ಭಾರತವು ಕೇವಲ ಜಾಗತಿಕ ರಕ್ಷಣಾ ವಸ್ತುಗಳ ತಯಾರಕ ಕಂಪನಿಗಳ ಮಾರುಕಟ್ಟೆಯಾಗಿಲ್ಲ. ಭಾರತವು ಇಂದು ಸಮರ್ಥ ರಕ್ಷಣಾ ಸಹಭಾಗಿತ್ವದ ದೇಶವಾಗಿದೆ. ಈ ಸಹಭಾಗಿತ್ವವು ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚು ಮುಂದಿರುವ ರಾಷ್ಟ್ರಗಳು, ತಮ್ಮ ರಕ್ಷಣಾ ಅವಶ್ಯಕತೆಗಳಿಗಾಗಿ ವಿಶ್ವಾಸಾರ್ಹ ಪಾಲುದಾರರನ್ನು ಹುಡುಕುತ್ತಿರುವ ರಾಷ್ಟ್ರಗಳೊಂದಿಗೆ ಸಹ ಆಗಿದೆ ಎಂದರು.
ಇಂದು ಭಾರತ ವಿಶ್ವದಲ್ಲಿ ರಕ್ಷಣಾ ಕಂಪನಿಗಳಿಗೆ ಕೇವಲ ಮಾರುಕಟ್ಟೆಯಾಗಿಲ್ಲ. ಭಾರತ ಇಂದು ಸಂಭಾವ್ಯ ರಕ್ಷಣಾ ಪಾಲುದಾರ. ಈ ಸಹಭಾಗಿತ್ವವು ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚು ಮುಂದಿರುವ ರಾಷ್ಟ್ರಗಳು, ತಮ್ಮ ರಕ್ಷಣಾ ಅವಶ್ಯಕತೆಗಳಿಗಾಗಿ ವಿಶ್ವಾಸಾರ್ಹ ಪಾಲುದಾರರನ್ನು ಹುಡುಕುತ್ತಿರುವ ರಾಷ್ಟ್ರಗಳೊಂದಿಗೆ ಸಹ ಆಗಿದೆ: PM
#AeroIndia ಭಾರತದ ಸಾಮರ್ಥ್ಯಗಳನ್ನು ವಿಸ್ತರಿಸುವ ಒಂದು ಉದಾಹರಣೆಯಾಗಿದೆ. ಇಲ್ಲಿ ಸುಮಾರು 100 ರಾಷ್ಟ್ರಗಳ ಉಪಸ್ಥಿತಿಯು ಭಾರತದ ಮೇಲಿನ ವಿಶ್ವ ನಂಬಿಕೆಯನ್ನು ಹೆಚ್ಚಿಸಿದೆ ಎಂದು ತೋರಿಸುತ್ತದೆ. ಭಾರತ ಮತ್ತು ವಿಶ್ವದ 700ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಿದ್ದಾರೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇವನ್ನೂ ಓದಿ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.