ADVERTISEMENT

ಪೊಲೀಸರ ಅವಹೇಳನ: ಟ್ಯಾಟೂ ಕಲಾವಿದನ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:58 IST
Last Updated 20 ಜುಲೈ 2024, 15:58 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಪೊಲೀಸರ ಬಗ್ಗೆ ಅವಹೇಳನದ ಟ್ಯಾಟೂ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಕಲಾವಿದನ ವಿರುದ್ಧ ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ರಿತೇಶ್‌ ಅಘಾರಿಯಾ ಎಂಬುವವರ ವಿರುದ್ಧ ಶಾಂತಿ ಭಂಗ, ಉದ್ದೇಶ ಪೂರ್ವಕ ಅವಮಾನ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ. ‌

ಬ್ರಿಗೇಡ್‌ ರಸ್ತೆಯಲ್ಲಿ ಟ್ಯಾಟೂ ಸ್ಟುಡಿಯೊ ಹೊಂದಿರುವ ಅವರಿಗೆ ನೋಟಿಸ್‌ ನೀಡಲಾಗಿದೆ. ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ರಿತೇಶ್‌ ಅವರು ವ್ಯಕ್ತಿಯೊಬ್ಬರ ಎದೆಯ ಮೇಲೆ ಪೊಲೀಸರನ್ನು ಅವಹೇಳನ ಮಾಡುವ ರೀತಿಯ ಬರಹವನ್ನು ಟ್ಯಾಟೂ ಹಾಕಿದ್ದರು. ಈ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು. ಸಾರ್ವಜನಿಕರು ಈ ಪೋಸ್ಟ್‌ ಗಮನಿಸಿ ‘ಎಕ್ಸ್‌’ ಖಾತೆಯಲ್ಲಿ ನಗರ ಪೊಲೀಸರಿಗೆ ಟ್ಯಾಗ್‌ ಮಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.