ADVERTISEMENT

ಬೆಂಗಳೂರು | ಉದ್ಯಮಿ ಮನೆಯಲ್ಲಿ ಕಳ್ಳತನ: ಇಬ್ಬರ ಸೆರೆ

ಅಳಿಯನ ಕೃತ್ಯಕ್ಕೆ ಹೆದರಿ ಮಾವ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 16:10 IST
Last Updated 15 ಅಕ್ಟೋಬರ್ 2024, 16:10 IST
ಕೇಶವ ಪಾಟೀಲ್‌ 
ಕೇಶವ ಪಾಟೀಲ್‌    

ಬೆಂಗಳೂರು: ನಗರದ ವಿಶ್ವೇಶ್ವರಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉದ್ಯಮಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೇಶವ ಪಾಟೀಲ್ ಹಾಗೂ ಆತನ ಸ್ನೇಹಿತ ನಿತಿನ್ ಉತ್ತಮ್‌ ಕಾಳೆ ಬಂಧಿತರು.‌ ಬಂಧಿತರಿಂದ 1 ಕೆ.ಜಿ. 579 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇದರ ಮೌಲ್ಯ ₹1.22 ಕೋಟಿ ಎಂದು ಪೊಲೀಸರು ಹೇಳಿದರು.

ಕದ್ದಿದ್ದ ಚಿನ್ನಾಭರಣಗಳನ್ನು ಆರೋಪಿಗಳು ಸಂಬಂಧಿಕರು ಹಾಗೂ ಸ್ನೇಹಿತರ ಮನೆಯಲ್ಲಿ ಬಚ್ಚಿಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಉದ್ಯಮಿ ಮನೆಯಲ್ಲಿ ಆರೋಪಿ ಕೇಶವ ಪಾಟೀಲ್‌ ಕಾರು ಚಾಲಕನಾಗಿದ್ದ. ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಮಾಲೀಕರ ಮನೆಯಲ್ಲಿ ಅಪಾರ ಹಣ ಹಾಗೂ ಚಿನ್ನ ಇರುವುದಾಗಿ ಸ್ನೇಹಿತ ನಿತಿನ್ ಕಾಳೆಗೆ ತಿಳಿಸಿದ್ದ. ಇಬ್ಬರೂ ಸೇರಿ ಕಳ್ಳತನ ಮಾಡಲು ಸಂಚು ರೂಪಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಕದ್ದ ಚಿನ್ನವನ್ನು ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನೆಲಸಿದ್ದ ತನ್ನ ಮಾವ ಮೋಹನ್ ಮನೆಯಲ್ಲಿ ನಿತಿನ್​ ಬಚ್ಚಿಟ್ಟಿದ್ದ. ಮೋಹನ್‌ ಮನೆ ಪರಿಶೀಲಿಸಿದಾಗ 650 ಗ್ರಾಂ. ಚಿನ್ನ ಪೊಲೀಸರಿಗೆ ಸಿಕ್ಕಿತ್ತು. ಇದರಿಂದ ಮೋಹನ್‌ ಆತಂಕಗೊಂಡಿದ್ದರು. ಪೊಲೀಸರು ತನ್ನನ್ನೂ ಬಂಧಿಸುತ್ತಾರೆ ಎನ್ನುವ ಭೀತಿಯಿಂದ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಮೂಲಗಳು ತಿಳಿಸಿವೆ.

ನಿತಿನ್‌ ಉತ್ತಮ್‌ ಕಾಳೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.