ಬೆಂಗಳೂರು: ವಿದೇಶಕ್ಕೆ ಉದ್ಯೋಗ ಕ್ಕಾಗಿ ತೆರಳುವವರಿಗೆ ನಕಲಿ ಅಂಕಪಟ್ಟಿ ತಯಾರಿಸಿಕೊಡುತ್ತಿದ್ದ ಬೆಂಗಳೂರಿನ ಆಯೂಬ್ ಷಾಷಾ (52) ಹಾಗೂ ಚಿಕ್ಕಬಳ್ಳಾಪುರದ ಖಲೀಲ್ ವುಲ್ಲಾ (52) ಎಂಬ ಆರೋಪಿಗಳನ್ನು ಶೇಷಾದ್ರಿಪುರಂ ಪೊಲೀಸರು ಬುಧವಾರ
ಬಂಧಿಸಿದ್ದಾರೆ.
38 ನಕಲಿ ಅಂಕಪಟ್ಟಿ, ಲ್ಯಾಪ್‌ಟಾಪ್, ಮುದ್ರಣ ಯಂತ್ರ ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
‘ಸೌದಿ ಅರೇಬಿಯಾ, ದುಬೈ ಸೇರಿ ವಿವಿಧ ರಾಷ್ಟ್ರಗಳಲ್ಲಿ ಉದ್ಯೋಗಕ್ಕೆ ತೆರಳುವವರಿಂದ ಆರೋಪಿಗಳು ಹಣ ಪಡೆದು ಬಿಕಾಂ, ಬಿಬಿಎಂ, ಬಿಇ ಹಾಗೂ ದ್ವಿತೀಯ ಪಿಯುಸಿ ತೇರ್ಗಡೆಯಾದಂತೆ ನಕಲಿ ಅಂಕಪಟ್ಟಿ ತಯಾರಿಸಿ ಕೊಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಈ ಹಿಂದೆಯೂ ಇದೇ ದಂಧೆಯಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಬಿಡುಗಡೆಯಾದ ಮೇಲೆ ಮತ್ತೆ ಇದೇ ದಂಧೆ ನಡೆಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.