ADVERTISEMENT

BJP– JDS ಮೈತ್ರಿ: ರಾಜಕಾರಣವೆಂದರೆ ಕೇವಲ ಗಣಿತವಲ್ಲ- ಬಿಜೆಪಿ ಮುಖಂಡ ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2023, 16:08 IST
Last Updated 24 ಸೆಪ್ಟೆಂಬರ್ 2023, 16:08 IST
<div class="paragraphs"><p>ಸಿ.ಟಿ. ರವಿ</p></div>

ಸಿ.ಟಿ. ರವಿ

   

ಬೆಂಗಳೂರು: ‘ರಾಜಕಾರಣ ಎಂದರೆ ಕೇವಲ ಗಣಿತವಲ್ಲ. ಅಲ್ಲಿ ರಸಾಯನ ವಿಜ್ಞಾನವೂ ಇರುತ್ತದೆ’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು.

ಬಿಜೆಪಿ– ಜೆಡಿಎಸ್‌ ಮೈತ್ರಿ ಕುರಿತು ಸುದ್ದಿಗಾರರಿಗೆ ಜತೆ ಭಾನುವಾರ ಪ್ರತಿಕ್ರಿಯಿಸಿದ ಅವರು, ‘ರಾಜಕಾರಣದಲ್ಲಿ ಇದೆಲ್ಲವೂ ಇರುತ್ತದೆ. ಜೆಡಿಎಸ್‌ ಈಗ ಎನ್‌ಡಿಎ ಭಾಗವಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರ ಹಂತದಲ್ಲಿ ಮೈತ್ರಿಯ ರಸಾಯನ ವಿಜ್ಞಾನ ಕೆಲಸ ಮಾಡಬೇಕು. ಸಮನ್ವಯ ಸಾಧಿಸುವುದಕ್ಕೆ ಪೂರಕವಾಗಿ ಎರಡೂ ಪಕ್ಷಗಳು ಕೆಲಸ ಮಾಡಬೇಕು’ ಎಂದರು.

ADVERTISEMENT

ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬೆಂಗಳೂರು ಬಂದ್‌ಗೆ ಬಿಜೆಪಿ ಬೆಂಬಲ ನೀಡಲಿದೆ. ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ಉದ್ಭವಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ಹೋರಾಟ ನಡೆಸುತ್ತಿರುವವರನ್ನು ಪಕ್ಷವು ಬೆಂಬಲಿಸಲಿದೆ ಎಂದು ಹೇಳಿದರು.

‘ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಗಟ್ಟಿ ನಿಲುವು ತೆಗೆದುಕೊಳ್ಳಬೇಕಿತ್ತು. ಆದರೆ, ‘ಇಂಡಿಯಾ’ ಮೈತ್ರಿಕೂಟಕ್ಕಾಗಿ ರಾಜ್ಯದ ಹಿತವನ್ನು ಬಲಿಕೊಡಲಾಗಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.