ಬೆಂಗಳೂರು: ಖಾಸಗಿ ಶಾಲೆಯೊಂದರ ಆನ್‌ಲೈನ್ ತರಗತಿಗಳಲ್ಲಿ ಕಿಡಿಗೇಡಿಗಳು ಅಶ್ಲೀಲ ವಿಡಿಯೊ ಹಾಗೂ ಸಂದೇಶಗಳನ್ನು ಹರಿಬಿಡುತ್ತಿದ್ದು, ಈ ಬಗ್ಗೆ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಯಲಹಂಕ ಬಳಿ ಇರುವ ಹಿರಿಯ ಪ್ರಾಥಮಿಕ ಶಾಲೆಯೊಂದರ ಮುಖ್ಯಸ್ಥರು ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಮೂಲಗಳು ಹೇಳಿವೆ.
‘ಕೋವಿಡ್ ಹಿನ್ನೆಲೆಯಲ್ಲಿ ಶಾಲೆ ಮಕ್ಕಳಿಗೆ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಗೂಗಲ್ ಮೀಟ್ ಆ್ಯಪ್ ಬಳಸಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಹೆಸರಿನ ಯೂಸರ್ ನೇಮ್ ಮೂಲಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.’
‘ಶಿಕ್ಷಕರು ತರಗತಿಗಳಿಗೆ ಹಾಜರಾಗಿ ಪಾಠ ಮಾಡುತ್ತಿದ್ದಾರೆ. ಇಂಥ ಆನ್‌ಲೈನ್ ತರಗತಿಗಳಿಗೆ ಕೆಲವರು ಅನಧಿಕೃತವಾಗಿ ಪ್ರವೇಶ ಪಡೆಯುತ್ತಿದ್ದು, ಅಂಥವರೇ ಅಶ್ಲೀಲ ವಿಡಿಯೊ ಹಾಗೂ ಅಶ್ಲೀಲ ಸಂದೇ
ಶಗಳನ್ನು ಕಳುಹಿಸುತ್ತಿರುವುದು ಗೊತ್ತಾ
ಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.
‘ಎವರ್ ಗ್ರೀನ್, ಡಾರ್ಕ್ ಲುಮಿನಸ್ ಹಾಗೂ ಪ್ಲೋಕರ್ ಬಾಯ್ಸ್ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ತರಗತಿಗಳಿಗೆ ಪ್ರವೇಶ ಪಡೆದಿದ್ದ ಮಾಹಿತಿ ಲಭ್ಯ
ವಾಗಿದೆ. ಆದರೆ, ಅವರು ಯಾವ ಇ– ಮೇಲ್ ಬಳಸಿದ್ದರು ಎಂಬುದು ಗೊತ್ತಾ
ಗಿಲ್ಲ. ಈ ಬಗ್ಗೆ ಮಾಹಿತಿ ಕೋರಿ ಗೂಗಲ್ ಕಂಪನಿ ಪ್ರತಿನಿಧಿಗ
ಳಿಗೆ ಇ– ಮೇಲ್ ಕಳುಹಿಸಲಾಗಿದೆ. ಅದಕ್ಕೆ ಪ್ರತಿಕ್ರಿಯೆ ಬರಬೇಕಿದೆ’ ಎಂದೂ ಮೂಲಗಳು ಹೇಳಿವೆ.
ವಿಡಿಯೊ ಅಳಿಸಿರುವ ಕಿಡಿಗೇಡಿಗಳು: ‘ಶಿಕ್ಷಕರು ಹಾಗೂ ಮಕ್ಕಳು, ಅಶ್ಲೀಲ ವಿಡಿಯೊ ಹಾಗೂ ಸಂದೇಶಗಳಿಂದ ಮುಜುಗರಕ್ಕೀಡಾಗಿದ್ದರು. ಗರಂ ಆಗಿದ್ದ ಶಿಕ್ಷಕರು, ‘ವಿಡಿಯೊ ಹಾಕಿದ್ದ ಯಾರು’ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದರು. ಹೆದರಿದ ಕಿಡಿಗೇಡಿಗಳು ಕೆಲ ವಿಡಿಯೊಗಳನ್ನು ಅಳಿಸಿ ಹಾಕಿದ್ದಾರೆ’ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
‘ತರಗತಿ ವೇಳೆ ಹಲವು ಬಾರಿ ವಿಡಿ
ಯೊಗಳು ಬಂದಿರುವುದಾಗಿ ಶಿಕ್ಷಕರು ಹೇಳುತ್ತಿದ್ದಾರೆ. ಅದಕ್ಕೆ ಪುರಾವೆಯಾಗಿ ಸ್ಕ್ರೀನ್ ಶಾರ್ಟ್‌ಗಳಿವೆ. ಶಾಲೆಗೆ ಸಂಬಂಧ
ಪಟ್ಟವರೇ ಕೃತ್ಯ ಎಸಗಿರುವ ಅನುಮಾ
ನವೂ ಇದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.