ADVERTISEMENT

ಸಾಮೂಹಿಕ ಪ್ರಾರ್ಥನೆ: ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ತಾತ್ಕಾಲಿಕ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 16:16 IST
Last Updated 15 ಜೂನ್ 2024, 16:16 IST
<div class="paragraphs"><p>ಸಾಮೂಹಿಕ ಪ್ರಾರ್ಥನೆ: ಸಂಗ್ರಹ ಚಿತ್ರ&nbsp;</p></div>

ಸಾಮೂಹಿಕ ಪ್ರಾರ್ಥನೆ: ಸಂಗ್ರಹ ಚಿತ್ರ 

   

ಬೆಂಗಳೂರು: ಮೈಸೂರು ರಸ್ತೆಯ ಬಿಬಿ ಜಂಕ್ಷನ್‌ ಬಳಿಯ ಮಸೀದಿ ಮತ್ತು ಚಾಮರಾಜಪೇಟೆ ಬಿಬಿಎಂಪಿ ಆಟದ ಮೈದಾನದಲ್ಲಿ ಜೂನ್‌ 17ರಂದು ಬಕ್ರೀದ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಅಂದು ಮೈಸೂರು ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕ ನಿರ್ಬಂಧಿಸಲಾಗಿದೆ.

ಬೆಳಿಗ್ಗೆ 6ರಿಂದ ಪ್ರಾರ್ಥನೆ ಮುಕ್ತಾಯವಾಗುವವರೆಗೆ ಬಿಜಿಎಸ್‌ ಮೇಲ್ಸೇತುವೆಯಿಂದ ಪುರಭವನದವರೆಗೆ ಎಲ್ಲ ಮಾದರಿಯ ವಾಹನ ಸಂಚಾರ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ADVERTISEMENT

ಪರ್ಯಾಯ ಮಾರ್ಗಗಳು:

ಮೈಸೂರು ರಸ್ತೆಯ ಕಡೆಯಿಂದ ಪುರಭವನ ಕಡೆಗೆ ತೆರಳುವ ವಾಹನಗಳು ಬ್ಯಾಟರಾಯನಪುರ ಸಂಚಾರ ಠಾಣಾ ವ್ಯಾಪ್ತಿಯ ಕಿಮ್ಕೊ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ವಿಜಯನಗರದ ಮೂಲಕ ಸಾಗಬಹುದು.

ಪುರಭವನ ಕಡೆಯಿಂದ ಮೈಸೂರು ಕಡೆಗೆ ತೆರಳುವ ವಾಹನಗಳು ಬಿಜಿಎಸ್ ಮೇಲ್ಸೇತುವೆಯ ಕೆಳಗಿನ ರಸ್ತೆಯನ್ನು ಬಳಸಿಕೊಂಡು ವೆಟರ್ನರಿ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ಗೂಡ್ಸ್‌ ಶೆಡ್ ರಸ್ತೆಯ ಮೂಲಕ ಅಥವಾ ಸಿರ್ಸಿ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ಜೆಜೆ ನಗರ–ಟ್ಯಾಂಕ್‌ಬಂಡ್ ರಸ್ತೆ–ಬಿನ್ನಿಮಿಲ್‌ ಜಂಕ್ಷನ್– ಹುಣಸೇಮರದ ಮೂಲಕ ಸಾಗಬಹುದು.

ಬಸವನಗುಡಿ ಹಾಗೂ ಚಾಮರಾಜಪೇಟೆ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವ ವಾಹನಗಳು, ಚಾಮರಾಜಪೇಟೆ 1ನೇ ಮುಖ್ಯರಸ್ತೆ, 5ನೇ ಅಡ್ಡ ರಸ್ತೆ ಮೂಲಕ ಮೈಸೂರು ರಸ್ತೆಯ ಸಿರ್ಸಿ ವೃತ್ತ, ಬಿನ್ನಿಮಿಲ್‌ ರಸ್ತೆ ಅಥವಾ ಗೂಡ್ಸ್‌ ಶೆಡ್‌ ರಸ್ತೆಯ ಮೂಲಕ ಸಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.