ADVERTISEMENT

KAS ಅಧಿಕಾರಿ ಬಿ.ಎ ಜಗದೀಶ್‌ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿ: ACSಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 15:47 IST
Last Updated 17 ಜೂನ್ 2024, 15:47 IST
   

ಬೆಂಗಳೂರು: ‘ಅರಣ್ಯ ಭೂಮಿಯನ್ನು ಗೋಮಾಳವೆಂದು ಮರು ನಮೂದು (ಇಂಡೀಕರಣ) ಮಾಡಿ ಆದೇಶ ಹೊರಡಿಸಿದ ಆರೋಪ ಎದುರಿಸುತ್ತಿರುವ ಹಿರಿಯ ಕೆಎಎಸ್‌ ಅಧಿಕಾರಿ ಬಿ.ಎ ಜಗದೀಶ್‌ ಅವರ ವಿರುದ್ಧ  ಶಿಸ್ತು ಕ್ರಮ ಕೈಗೊಳ್ಳಲು ಅವಕಾಶವಾಗುವಂತೆ ಕರಡು ದೋಷಾರೋಪ ಪಟ್ಟಿ ಸಿದ್ಧಪಡಿಸಿ, ಇಲಾಖೆಯ ಸಚಿವರ ಅನುಮೋದನೆಯೊಂದಿಗೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ (ಎಸಿಎಸ್‌) ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೂಚನೆ ನೀಡಿದೆ.

ಹಾಸನ ಉಪ ವಿಭಾಗಾಧಿಕಾರಿ ಆಗಿದ್ದಾಗ, ಹಾಸನ ಉಪ ವಿಭಾಗದ ಶಾಂತಿಗ್ರಾಮ ಹೋಬಳಿಯ ತ್ಯಾವಿಹಳ್ಳಿ ಗ್ರಾಮದ ಸರ್ವೇ ನಂ. 22ರಲ್ಲಿ 61 ಎಕರೆ 31 ಗುಂಟೆ ಅರಣ್ಯ ಪ್ರದೇಶವನ್ನು ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ ಅನಧಿಕೃತವಾಗಿ ಗೋಮಾಳವೆಂದು ಮರು ನಮೂದು ಮಾಡಿರುವ ಆರೋಪವನ್ನು ಜಗದೀಶ್‌ ಅವರು ಎದುರಿಸುತ್ತಿದ್ದಾರೆ.

‘ಸರ್ಕಾರಿ ಕೆಲಸದ ನಿರ್ವಹಣೆ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ ಪ್ರಕರಣ ಇದಾಗಿರುವುದರಿಂದ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯ ಬದಲು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳಡಿ ಶಿಸ್ತು ಕ್ರಮ ಕೈಗೊಳ್ಳಬೇಕಾಗಿದೆ. ಮುಖ್ಯಮಂತ್ರಿಯೂ ಇದಕ್ಕೆ ಅನುಮೋದನೆ ನೀಡಿದ್ದಾರೆ’ ಎಂದು ಎಸಿಎಸ್‌ಗೆ ಬರೆದ‌ ಟಿಪ್ಪಣಿಯಲ್ಲಿ ಡಿಪಿಎಆರ್‌ ಉಲ್ಲೇಖಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.