ADVERTISEMENT

'ವೀರೇಂದ್ರ ಹೆಗ್ಗಡೆ ವರ್ಷದ ವ್ಯಕ್ತಿ: ಪ್ರೊ.ಜಿ.ವಿ ಯುಗದ ಸಾಧಕ'

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 2:20 IST
Last Updated 25 ಡಿಸೆಂಬರ್ 2019, 2:20 IST
ಡಿ.ವೀರೇಂದ್ರ ಹೆಗ್ಗಡೆ ಹಾಗೂ ಪ್ರೊ.ಜಿ.ವೆಂಕಟಸುಬ್ಬಯ್ಯ
ಡಿ.ವೀರೇಂದ್ರ ಹೆಗ್ಗಡೆ ಹಾಗೂ ಪ್ರೊ.ಜಿ.ವೆಂಕಟಸುಬ್ಬಯ್ಯ   

ಬೆಂಗಳೂರು: ಬೆಂಗಳೂರು ಪ್ರೆಸ್‌ಕ್ಲಬ್‌ ನೀಡುವ ವರ್ಷದ ವ್ಯಕ್ತಿ ಪ್ರಶಸ್ತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹಾಗೂ ಯುಗದ ಸಾಧಕ ಪ್ರಶಸ್ತಿಗೆ ಹಿರಿಯ ಸಾಹಿತಿ, ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಆಯ್ಕೆಯಾಗಿದ್ದಾರೆ.

ಪ್ರೆಸ್‌ಕ್ಲಬ್‌ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಎಂ.ಸಿದ್ಧರಾಜು, ಕೆ.ಸುನಿಲ್‌ ಕುಮಾರ್‌, ಎಚ್‌.ಕೆ.ಸಾವಿತ್ರಿ, ಬಿ.ವಿ.ನಾಗರಾಜು, ರವೀಂದ್ರ ಜಿ.ಭಟ್ಟ, ಕೆ.ಎನ್‌.ಚೆನ್ನೇಗೌಡ, ಬಿ.ಹರಿಶ್ಚಂದ್ರ ಭಟ್‌, ಎಂ.ಅಬ್ದುಲ್ ಹಮೀದ್ (ಪಾಳ್ಯ), ಇಮ್ರಾನ್‌ ಖುರೇಶಿ, ಜಿ.ಕೆ.ಸತ್ಯ, ಲಕ್ಷ್ಮಣ ಕೊಡಸೆ, ಜೋಸೆಫ್‌ ಹೂವರ್‌, ಎನ್‌.ಎಸ್‌.ಶಂಕರ್‌, ಬಿ.ಕೆ.ರವಿ, ರು.ಬಸಪ್ಪ, ಜಯಪ್ರಕಾಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಇದೇ 31ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡುವರು. ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಪಾಲ್ಗೊಳ್ಳುವರು ಎಂದು ಪ್ರೆಸ್‌ಕ್ಲಬ್‌ ಅಧ್ಯಕ್ಷ ಕೆ.ಸದಾಶಿವ ಶೆಣೈ ಮತ್ತು ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಕಿರಣ್‌ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.