ADVERTISEMENT

ತೋಟಗಾರ ಸಂಘದಿಂದ ಹೆಚ್ಚು ಡಿವಿಡೆಂಡ್‌: ಹರೀಶ್ ಬಾಬು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 16:12 IST
Last Updated 16 ಸೆಪ್ಟೆಂಬರ್ 2024, 16:12 IST
ನೃತ್ಯ ಕ್ಷೇತ್ರ ಸಾಧಕಿ ಬೃಂದಾ ಶ್ರೀ, ಸ್ಪೂರ್ತಿ ಹಾಗೂ ಗಣಿತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರೋಹಿತ್ ರಾಜೇಶ್ ಅವರನ್ನು ಸಂಘದ ಅಧ್ಯಕ್ಷ ಹರೀಶ್ ಬಾಬು ಗೌರವಿಸಿದರು
ನೃತ್ಯ ಕ್ಷೇತ್ರ ಸಾಧಕಿ ಬೃಂದಾ ಶ್ರೀ, ಸ್ಪೂರ್ತಿ ಹಾಗೂ ಗಣಿತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರೋಹಿತ್ ರಾಜೇಶ್ ಅವರನ್ನು ಸಂಘದ ಅಧ್ಯಕ್ಷ ಹರೀಶ್ ಬಾಬು ಗೌರವಿಸಿದರು   

ಕೆ.ಆರ್.ಪುರ: ಕರ್ನಾಟಕ ನವಶಕ್ತಿ ತೋಟಗಾರರ ಸಹಕಾರ ಸಂಘ ಬ್ಯಾಂಕ್, ಇತರೆ ಸೊಸೈಟಿ ಮತ್ತು ಬ್ಯಾಂಕ್‌ಗಳಿಗಿಂತ ಶೇ 15 ರಷ್ಟು ಡಿವಿಡೆಂಡ್ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಹರೀಶ್ ಬಾಬು ತಿಳಿಸಿದರು.

ಕೆ.ಆರ್.ಪುರ ಸಮೀಪದ ಮಾರತ್ತಹಳ್ಳಿಯಲ್ಲಿ ಏರ್ಪಡಿಸಿದ್ದ ತಿಗಳ ಸಮಾಜದ ಕರ್ನಾಟಕ ನವಶಕ್ತಿ ತೋಟಗಾರರ ಸಹಕಾರ ಸಂಘದ ಆರನೇ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು ಪೂರ್ವ ತಾಲ್ಲೂಕು ತಿಗಳ ಕ್ಷತ್ರಿಯ ಸಂಘದ ಅಧ್ಯಕ್ಷ ವೇಣುಗೋಪಾಲ್, ಪೂರ್ವ ತಾಲ್ಲೂಕಿನಲ್ಲಿ ಈ ಸಂಘ ಹೆಚ್ಚು ಬೆಳವಣಿಗೆ ಹೊಂದಿದೆ. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಲಾಯಿತು. ಸಭೆಯಲ್ಲಿ ಸಹಕಾರ ಸಂಘ ಉಪಾಧ್ಯಕ್ಷ ವೈ. ಜಗನ್ನಾಥ್, ನಿರ್ದೇಶಕರಾದ ಎಸ್.ಗೋಪಾಲಯ್ಯ. ಟಿ.ಚಂದ್ರಪ್ಪ, ಮಂಜುನಾಥ್, ಸೋಮಶೇಖರ್, ರಘುನಾಥ್, ಲೋಕೇಶ್, ಕೃಷ್ಣಮೂರ್ತಿ, ರಾಜೇಶ್ ಹಾಗೂ ಸಂಘದ ಎಲ್ಲಾ ನಿರ್ದೇಶಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.