ADVERTISEMENT

ನೈಸ್ ರಸ್ತೆಯಲ್ಲಿ ರಾತ್ರಿ ದ್ವಿಚಕ್ರ ವಾಹನಗಳ ಓಡಾಟ ನಿಷೇಧ: ವಾಹನಗಳಿಗೆ ವೇಗದ ಮಿತಿ

ನೈಸ್ ರಸ್ತೆಯಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೆ ಎಲ್ಲ ಸಮಯದಲ್ಲಿ ವೇಗದ ಮಿತಿಯನ್ನು ಹೇರಲಾಗಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2024, 13:47 IST
Last Updated 2 ಆಗಸ್ಟ್ 2024, 13:47 IST
<div class="paragraphs"><p>ನೈಸ್ ರಸ್ತೆ</p></div>

ನೈಸ್ ರಸ್ತೆ

   

ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳಿಗೆ ಅತಿ ವೇಗವೇ ಮುಖ್ಯ ಕಾರಣ ಎಂದು ಹೇಳಿರುವ ಬೆಂಗಳೂರು ಸಂಚಾರ ಪೊಲೀಸ್ , ದ್ವಿ ಚಕ್ರ ವಾಹನಗಳ ಓಡಾಟವನ್ನು ರಾತ್ರಿ ನಿಷೇಧಿಸಿ ಆದೇಶಿಸಿದೆ.

ಅಲ್ಲದೇ ಈ ರಸ್ತೆಯಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೆ ಎಲ್ಲ ಸಮಯದಲ್ಲಿ ವೇಗದ ಮಿತಿಯನ್ನು ಹೇರಲಾಗಿದೆ.

ADVERTISEMENT

ಆ ಪ್ರಕಾರ ಎಲ್ಲ ವರ್ಗದ ಸರಕು (ಗೂಡ್ಸ್) ವಾಹನಗಳಿಗೆ ವೇಗದ ಮಿತಿಯನ್ನು ಗಂಟೆಗೆ 80 ಕಿ.ಮೀ ಮಿತಿಗೊಳಿಸಲಾಗಿದೆ.

ದ್ವಿಚಕ್ರವಾಹನಗಳಿಗೆ ವೇಗದ ಮಿತಿಯನ್ನು ಗಂಟೆಗೆ 80 ಕಿ.ಮೀ ಮಿತಿಗೊಳಿಸಲಾಗಿದೆ. ದ್ವಿ ಚಕ್ರ ವಾಹನಗಳ ಓಡಾಟವನ್ನು ರಾತ್ರಿ 10 ರಿಂದ ಬೆಳಿಗ್ಗೆ 5ಗಂಟೆವರೆಗೆ ನಿಷೇಧಿಸಲಾಗಿದೆ.

9 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು (ಎಂ 2 ಮತ್ತು ಎಂ3 ವರ್ಗದ ವಾಹನಗಳು) ಕರೆದೊಯ್ಯುವ ವಾಹನಗಳಿಗೆ ವೇಗದ ಮಿತಿಯನ್ನು ಗಂಟೆಗೆ 100 ಕಿ.ಮೀ ಮಿತಿಗೊಳಿಸಲಾಗಿದೆ.

8 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು (ಎಂ 1 ವರ್ಗದ ವಾಹನಗಳು) ಕರೆದೊಯ್ಯುವ ವಾಹನಗಳಿಗೆ ವೇಗದ ಮಿತಿಯನ್ನು ಗಂಟೆಗೆ 120 ಕಿ.ಮೀ ಮಿತಿಗೊಳಿಸಲಾಗಿದೆ.

ಇಂದಿನಿಂದಲೇ ಈ ಆದೇಶ ಜಾರಿಯಾಗಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಎಕ್ಸ್ ತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.