ಕೆ.ಆರ್.ಪುರ: ಭಾರತೀಯ ಸೈನಿಕರ ಶೌರ್ಯ ಮತ್ತು ಅಂತಃಸ್ಥೈರ್ಯವನ್ನು ಮೆಲುಕು ಹಾಕುವ ನಿದರ್ಶನಗಳು ಮನಸ್ಸಿಗೆ ಬೆಚ್ಚಗಿನ ಅನುಭೂತಿ ನೀಡುತ್ತವೆ ಎಂದು ಪರಮ ವೀರಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ಹೇಳಿದರು.
ಕೆ.ಆರ್.ಪುರ ಸಮೀಪದ ಮಾರತ್ತಹಳ್ಳಿಯ ಎಚ್ಎಎಲ್ ಮ್ಯಾನೇಜ್‌ಮೆಂಟ್ ಅಕಾಡೆಮಿಯಲ್ಲಿ ಹಮ್ಮಿಕೊಂಡಿದ ‘ಸಶಕ್ತ ಮತ್ತು ಸಮೃದ್ಧ ಭಾರತಕ್ಕಾಗಿ’ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಪ್ರಾಕ್ಟೀಷನರ್ಸ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ರಕ್ಷಣಾ ಪಡೆಗಳ ಶೌರ್ಯಕಥೆಗಳ ಆಧಾರಿತ ಉದಾಹರಣೆಗಳು ನಮ್ಮ ನರನಾಡಿಗಳನ್ನು ಉಕ್ಕಿನಂತಾಗಿಸುತ್ತದೆ. ನಮ್ಮ ಯುವಜನರ ಮನಸ್ಸುಗಳನ್ನು ಪ್ರಜ್ವಲಿಸುವಂತೆ ಮಾಡುತ್ತಿವೆ ಎಂದರು.
ಈ ಸಂಧರ್ಭದಲ್ಲಿ ಕ್ಯಾಪ್ಟನ್ ನಿಕುಂಜ್ ಪರಶರ್, ರಾಂಪ್ಮೈಸಿಟಿ ಸಿಇಒ ಪ್ರತೀಕ್ ಖಾಂಡೆಲ್ವಾಲ್, ಸ್ವೆಸ್ ಕಿಡ್ಸ್ ಇಂಡಿಯಾ ಸಿಇಒ ಡಾ.ಕೆಸನ್, ಡಾ.ಶ್ರೀಕಾಂತ್ ಶರ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.