ADVERTISEMENT

ರೈಲ್ವೆ ಕಾಮಗಾರಿ: ರೈಲು ಸಂಚಾರ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 15:31 IST
Last Updated 27 ಜೂನ್ 2024, 15:31 IST
ರೈಲು ಹಳಿ
ರೈಲು ಹಳಿ   

ಬೆಂಗಳೂರು: ಕೆಂಗೇರಿ-ಹೆಜ್ಜಾಲ ನಿಲ್ದಾಣಗಳ ಮಧ್ಯದ ರೈಲ್ವೆ ಲೆವೆಲ್ ಕ್ರಾಸಿಂಗ್ ಮತ್ತು ಕೆಎಸ್‌ಆರ್ ಬೆಂಗಳೂರು-ಕಂಟೋನ್ಮೆಂಟ್‌ ನಿಲ್ದಾಣಗಳ ಮಧ್ಯದ ಸೇತುವೆಯಲ್ಲಿ ಗರ್ಡರ್‌ ಅಳವಡಿಕೆ, ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 1ರಿಂದ 10ರವರೆಗೆ ರೈಲು ಸಂಚಾರ ವ್ಯತ್ಯಯವಾಗಲಿದೆ.

ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲು, ಮೈಸೂರು–ಕೆಎಸ್ಆರ್‌ ಬೆಂಗಳೂರು–ಮೈಸೂರು ಮಾಲ್ಗುಡಿ ಎಕ್ಸ್‌ಪ್ರೆಸ್‌, ಚಾಮರಾಜನಗರ-ತಿರುಪತಿ ಎಕ್ಸ್‌ಪ್ರೆಸ್, ಎಂಜಿಆರ್ ಚೆನ್ನೈ ಸೆಂಟ್ರಲ್-ತಿರುಪತಿ- ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್, ತಿರುಪತಿ-ಚಾಮರಾಜನಗರ ಎಕ್ಸ್‌ಪ್ರೆಸ್, ಅರಸೀಕೆರೆ-ಮೈಸೂರು ಪ್ಯಾಸೆಂಜರ್ ಸ್ಪೆಷಲ್, ಮೈಸೂರು-ಎಸ್‌ಎಂವಿಟಿ ಬೆಂಗಳೂರು ಪ್ಯಾಸೆಂಜರ್ ಸ್ಪೆಷಲ್, ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು ಸ್ಪೆಷಲ್, ಎಸ್‌ಎಂವಿಟಿ ಬೆಂಗಳೂರು-ಮೈಸೂರು ಪ್ಯಾಸೆಂಜರ್ ಸ್ಪೆಷಲ್, ಕೆಎಸ್‌ಆರ್ ಬೆಂಗಳೂರು-ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಮೈಸೂರು-ಅರಸೀಕೆರೆ ಪ್ಯಾಸೆಂಜರ್ ಸ್ಪೆಷಲ್, ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು ಸ್ಪೆಷಲ್, ರೈಲು, ಕೆಎಸ್‌ಆರ್ ಬೆಂಗಳೂರು-ಚನ್ನಪಟ್ಟಣ ಮೆಮು ಸ್ಪೆಷಲ್ ರೈಲುಗಳ ಸಂಚಾರ ರದ್ದಾಗಲಿದೆ.

ಜುಲೈ 2 ಮತ್ತು 9 ರಂದು ಹೊರಡುವ ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು ಚನ್ನಪಟ್ಟಣ - ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ, ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ವೈಟ್‌ಫೀಲ್ಡ್ - ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ, ಹಜೂರ್ ಸಾಹಿಬ್ ನಾಂದೇಡ್-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಯಲಹಂಕ-ಕೆಎಸ್‌ಆರ್ ಬೆಂಗಳೂರುನಿಲ್ದಾಣಗಳ ನಡುವಿನ ಸಂಚಾರ ಭಾಗಶಃ ರದ್ದುಗೊಳ್ಳಲಿದೆ. 

ADVERTISEMENT

ಹೊಸಪೇಟೆ-ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ ಸ್ಪೆಷಲ್ ರೈಲು ಯಶವಂತಪುರ-ಕೆಎಸ್‌ಆರ್ ಬೆಂಗಳೂರು ನಡುವೆ, ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಯಶವಂತಪುರ-ಕೆಎಸ್‌ಆರ್ ಬೆಂಗಳೂರು ನಡುವೆ, ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಬಯ್ಯಪ್ಪನಹಳ್ಳಿ ಮತ್ತು ಕೆಎಸ್‌ಆರ್ ಬೆಂಗಳೂರು ನಡುವೆ, ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಕೆಎಸ್‌ಆರ್ ಬೆಂಗಳೂರು - ಯಶವಂತಪುರ ನಡುವೆ, ಕೆಎಸ್‌ಆರ್ ಬೆಂಗಳೂರು-ಹೊಸಪೇಟೆ ಪ್ಯಾಸೆಂಜರ್ ಸ್ಪೆಷಲ್ ರೈಲು ಕೆಎಸ್‌ಆರ್ ಬೆಂಗಳೂರು - ಯಶವಂತಪುರ ನಡುವೆ ಭಾಗಶಃ ರದ್ದುಗೊಳ್ಳಲಿದೆ.

ಸಿಎಸ್ಎಂಟಿ ಮುಂಬೈ-ಕೆಎಸ್‌ಆರ್ ಬೆಂಗಳೂರು ಉದ್ಯಾನ್ ಎಕ್ಸ್‌ಪ್ರೆಸ್‌ ರೈಲು, ಮೈಲಾಡುತುರೈ-ಮೈಸೂರು ಎಕ್ಸ್‌ಪ್ರೆಸ್‌, ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು, ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್‌ ರೈಲು ಮಾರ್ಗಮಧ್ಯೆಯೆ 15ರಿಂದ 30 ನಿಮಿಷವರೆಗೆ ನಿಯಂತ್ರಿಸಲಾಗುತ್ತದೆ.

ಕೆಎಸ್‌ಆರ್ ಬೆಂಗಳೂರು-ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್‌, ಲೋಕಮಾನ್ಯ ತಿಲಕ್ ಟರ್ಮಿನಸ್-ಕೊಯಮತ್ತೂರು ಎಕ್ಸ್‌ಪ್ರೆಸ್‌ ರೈಲು ಮಾರ್ಗ ಬದಲಾಯಿಸಿ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ರೈಲುಗಳ ನಿಲುಗಡೆ ಮುಂದುವರಿಕೆ ಯಶವಂತಪುರ-ಬಿಕಾನೇರ್-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲು ಬೀರೂರು ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಜೂನ್ 30ರವರೆಗೆ ಹೊಂದಿತ್ತು. ಅದನ್ನು ಸೆಪ್ಟೆಂಬರ್ 30ರವರೆಗೆ ಮುಂದುವರಿಸಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.