ಬೆಂಗಳೂರು: ಐಎಎಸ್ 30 ಅಧಿಕಾರಿಗಳಿಗೆ ಹೊಸ ವರ್ಷದ ಮುನ್ನಾ ದಿನ ಸರ್ಕಾರ ಬಡ್ತಿನೀಡಿ ಆದೇಶಿಸಿದೆ.
ಕಾರ್ಯದರ್ಶಿ ಹುದ್ದೆಯಲ್ಲಿದ್ದ ಶ್ರೀವತ್ಸ ಕೃಷ್ಣ (ಕಾಫಿ ಮಂಡಳಿ), ಎಂ.ಮಹೇಶ್ವರರಾವ್ (ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ), ಟಿ.ಕೆ.ಅನಿಲ್ ಕುಮಾರ್ (ಪ್ರವಾಸೋದ್ಯಮ ಇಲಾಖೆ) ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಡ್ತಿಗೆ ನೀಡಲಾಗಿದೆ.
ಸೂಪರ್‌ಟೈಮ್ ಸ್ಕೇಲ್‌ಗೆ ಬಡ್ತಿ ಪಡೆದವರು: ಆರ್.ವಿಶಾಲ್ (ಮುಖ್ಯ ಮಂತ್ರಿ ಕಚೇರಿ), ಎಂ.ಎನ್.ಅಜಯ್ ನಾಗಭೂಷಣ್ (ಡಿಪಿಎಆರ್– ಚುನಾವಣೆ), ವಿ.ಅನ್ಬುಕುಮಾರ್ (ಬಿಬಿಎಂಪಿ), ಎನ್.ವಿ.ಪ್ರಸಾದ್ (ಶಿಕ್ಷಣ ಇಲಾಖೆ), ಸಿ.ಶಿಖಾ (ಬಿಎಂಟಿಸಿ),
ಎನ್.ಜಯರಾಮ್ (ಕೃಷ್ಣಭಾಗ್ಯ ಜಲನಿಗಮ), ಬಿ.ಎಸ್.ಶೇಖರಪ್ಪ (ನಗರಾಭಿವೃದ್ಧಿ ಇಲಾಖೆ), ಜಿ.ಸತ್ಯವತಿ (ಕೆಪಿಎಸ್‌ಸಿ).
ಆಯ್ಕೆ ಶ್ರೇಣಿಗೆ ಬಡ್ತಿ: ಕೆ.ವಿ.ತ್ರಿಲೋಕ ಚಂದ್ರ (ನೋಂದಣಿ ಇಲಾಖೆ), ಕೆ.ಪಿ.ಮೋಹನ್ ರಾಜ್ (ಉದ್ಯೋಗ– ತರಬೇತಿ), ರಿಚರ್ಡ್ ವಿನ್ಸೆಂಟ್ ಡಿಸೋಜಾ (ಗೋದಾಮು ನಿಗಮ).
ಕಿರಿಯ ಆಡಳಿತ ಶ್ರೇಣಿಗೆ ಬಡ್ತಿ: ಅಭಿರಾಮ್ ಜಿ.ಶಂಕರ್ (ಮೈಸೂರು ಜಿಲ್ಲಾಧಿಕಾರಿ), ಸಿಂಧೂ ಬಿ.ರೂಪೇಶ್ (ದಕ್ಷಿಣ ಕನ್ನಡ ಜಿಲ್ಲಾಧಿಕಾರಿ), ಎಂ.ಕೂರ್ಮರಾವ್ (ಯಾದಗಿರಿ ಜಿಲ್ಲಾಧಿಕಾರಿ), ಆರ್.ರಂಗಪ್ರಿಯ (ಜೆಸ್ಕಾಂ), ಅನಿರುದ್ಧ್ ಸರವಣ (ಕಾಲೇಜು ಶಿಕ್ಷಣ), ಪಿ.ಸುನಿಲ್ ಕುಮಾರ್ (ಕೊಪ್ಪಳ ಜಿಲ್ಲಾಧಿಕಾರಿ), ಹೆಪ್ಸಿಬಾ ರಾಣಿ ಕೋರ್ಲಾಪಟಿ (ಬೆಂಗಳೂರು ಸ್ಮಾರ್ಟ್ ಸಿಟಿ), ಬಿ.ಶರತ್ (ಕಲಬುರ್ಗಿ ಜಿಲ್ಲಾಧಿಕಾರಿ).
ಸೀನಿಯರ್ ಟೈಮ್ ಸ್ಕೇಲ್: ಎಚ್.ವಿ. ದರ್ಶನ್ (ಕೋಲಾರ ಜಿ.ಪಂ ಸಿಇಒ), ಮಹಮದ್ ಇಕ್ರಮುಲ್ಲಾ ಷರೀಫ್ (ರಾಮನಗರ ಜಿ.ಪಂ ಸಿಇಒ), ಕೆ. ಆನಂದ್ (ಗದಗ ಜಿ.ಪಂ ಸಿಇಒ), ಎಸ್. ಪೂವಿತಾ (ಕೆಯುಐಡಿಎಫ್‌ಸಿ), ಪಿ. ರಾಹುಲ್ ತುಕಾರಾಮ್ (ಕಲಬುರ್ಗಿ ನಗರಪಾಲಿಕೆ ಆಯುಕ್ತ), ಬಿ.ಎಚ್.ನಾರಾಯಣರಾವ್ (ಚಾಮರಾಜನಗರ ಜಿ.ಪಂ ಸಿಇಒ), ಜಿ.ಕೆ.ಗಂಗ್ವಾರ್ (ಬೀದರ್ ಜಿ.ಪಂ. ಸಿಇಒ), ಪ್ರೀತಿ ಗೆಹ್ಲೋಟ್ (ಉಡುಪಿ ಜಿ.ಪಂ ಸಿಇಒ).
ಐಎಫ್‌ಎಸ್ ಅಧಿಕಾರಿಗಳು: ಹೊಸ ವರ್ಷದ ಮುನ್ನಾದಿನ ಮಂಗಳವಾರ ಐಎಫ್‌ಎಸ್ 18 ಅಧಿಕಾರಿಗಳಿಗೆ ಸರ್ಕಾರ ಬಡ್ತಿ ನೀಡಿದೆ.
ಚಿಕ್ಕಮಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಮೋಹನ್ ರಾಜ್ ಅವರಿಗೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಡ್ತಿ ನೀಡಿದ್ದು, ಬೆಂಗಳೂರಿಗೆ (ಯೋಜನಾ ವಿಭಾಗ) ವರ್ಗಾವಣೆ ಮಾಡಲಾಗಿದೆ. ಧಾರವಾಡ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಆರ್.ಚೌವ್ಹಾಣ್ ಅವರಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಡ್ತಿ ನೀಡಿದ್ದು, ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ.
ಮೈಸೂರು ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್,ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್.ನೇಟಾಲ್ಕರ್ ಅವರಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಡ್ತಿ ನೀಡಿದ್ದು, ಅದೇ ಹುದ್ದೆಯಲ್ಲಿ ಮುಂದು ವರಿಸಲಾಗಿದೆ.
ಚಿಕ್ಕಮಗಳೂರು ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕ ಪಿ.ಶಂಕರ ಅವರಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಡ್ತಿನೀಡಿ, ಹಾಸನ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಸಿರ್ಸಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶ್ ಕುಮಾರ್ ಅವರಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ, ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಖತ್ ಸಿಂಗ್ ರಣಾವತ್ ಅವರಿಗೆ ಆಯ್ಕೆ ಶ್ರೇಣಿಗೆ ಬಡ್ತಿ ನೀಡಿದ್ದು,ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಿಂದ ಕಿರಿಯ ಆಡಳಿತ ಶ್ರೇಣಿ ಹುದ್ದೆಗೆ ಬಡ್ತಿಪಡೆದವರು. ಯಶ್ ಪಾಲ್ ಕ್ಷೀರ್‌ಸಾಗರ್ (ಕೊಪ್ಪಳ), ಡಿ. ಮಹೇಶ್ ಕುಮಾರ್ (ಧಾರವಾಡ), ವಿ. ಏಡುಕುಂಡಲ (ಕೊಳ್ಳೇಗಾಲ), ಎಸ್.ಪ್ರಭಾಕರನ್ (ಮಡಿಕೇರಿ), ಸೋನಾಲ್ ವೃಷ್ಣಿ (ಹಂಪಿ), ದೀಪ್ ಜೆ.ಕಂಟ್ರಾಕ್ಟರ್ (ಗುಂಗರನಹಟ್ಟಿ– ಧಾರವಾಡ).
ಆಯ್ಕೆ ಶ್ರೇಣಿಗೆ ಬಡ್ತಿ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಿಂದ ಆಯ್ಕೆ ಶ್ರೇಣಿಗೆ ಬಡ್ತಿಪಡೆದಎಂ.ವಿ. ಅಶಿಶ್ ರೆಡ್ಡಿ ಅವರಿಗೆ ಬೆಂಗಳೂರು ಅರಣ್ಯ(ಅಭಿವೃದ್ಧಿ) ಸಂರಕ್ಷಣಾಧಿ ಕಾರಿ ಹುದ್ದೆಗೆ, ಅರ್ಸಲಾನ್ ಅವರನ್ನು ಚಿಕ್ಕಬಳ್ಳಾಪುರಕ್ಕೆ, ಜಿ.ಆರ್. ಅಜ್ಜಯ್ಯ ಅವರನ್ನು ಹಳಿಯಾಳಕ್ಕೆ, ಜಿ. ಸಂತೋಷ್ ಕುಮಾರ್ ಅವರನ್ನು ಚಾಮರಾಜನಗರ ಹುಲಿ ಯೋಜನೆ ನಿರ್ದೇಶಕರನ್ನಾಗಿ, ಇ. ಶಿವಕುಮಾರ್ ಅವರನ್ನು ವಿರಾಜಪೇಟೆಗೆ ವರ್ಗಾವಣೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.