ADVERTISEMENT

ಬೆಂಗಳೂರು | ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ: 7 ವಿದೇಶಿ ಮಹಿಳೆಯರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 14:50 IST
Last Updated 25 ಫೆಬ್ರುವರಿ 2024, 14:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ‘ರೋರಾ ಲಕ್ಷುರಿ ಥಾಯ್‌’ ಸ್ಪಾ ಮೇಲೆ ಯಲಹಂಕ ಠಾಣೆ ಪೊಲೀಸರು ದಾಳಿ ಮಾಡಿದ್ದು, ಏಳು ವಿದೇಶಿ ಮಹಿಳೆಯರನ್ನು ರಕ್ಷಿಸಿದ್ದಾರೆ.

‘ಯಲಹಂಕ ಉಪನಗರದಲ್ಲಿರುವ ಸ್ಪಾನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ದಾಳಿ ಮಾಡಿ ಮಹಿಳೆಯರನ್ನು ರಕ್ಷಿಸಲಾಗಿದೆ. ಸ್ಪಾ ವ್ಯವಸ್ಥಾಪಕ ಕಿಶೋರ್‌ನನ್ನು ಬಂಧಿಸಲಾಗಿದೆ. ಸ್ಪಾ ಮಾಲೀಕ ಸೇರಿ ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಥಾಯ್ಲೆಂಡ್‌ನಿಂದ ಮಹಿಳೆಯರನ್ನು ಪ್ರವಾಸ ವೀಸಾದಡಿ ನಗರಕ್ಕೆ ಕರೆಸುತ್ತಿದ್ದ ಆರೋಪಿಗಳು, ಸ್ಪಾನಲ್ಲಿ ಕೆಲಸಕ್ಕೆ ಇರಿಸುತ್ತಿದ್ದರು. ಸ್ಪಾ ಹೆಸರಿನಲ್ಲಿ ಮಧ್ಯವರ್ತಿಗಳ ಮೂಲಕ ಗ್ರಾಹಕರನ್ನು ಆಹ್ವಾನಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.