ADVERTISEMENT

ಮದ್ಯದಂಗಡಿ ತೆರೆಯದಂತೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 21:10 IST
Last Updated 20 ಫೆಬ್ರುವರಿ 2021, 21:10 IST
ಮದ್ಯದಂಗಡಿ ತೆರೆಯದಂತೆ ಪ್ರತಿಭಟನೆ ನಡೆಸಿದ ಸ್ಥಳೀಯರು
ಮದ್ಯದಂಗಡಿ ತೆರೆಯದಂತೆ ಪ್ರತಿಭಟನೆ ನಡೆಸಿದ ಸ್ಥಳೀಯರು   

ರಾಜರಾಜೇಶ್ವರಿನಗರ: ಕೊಡಿಗೇಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಚಿಕ್ಕಗೊಲ್ಲರಹಟ್ಟಿ ಜನವಸತಿ ಪ್ರದೇಶದಲ್ಲಿ ಬಾರ್ ಅಂಡ್ ರೆಸ್ಟೊರೆಂಟ್ ತೆರೆಯಬಾರದು ಎಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಿಂದ ಮಾಗಡಿ ರಸ್ತೆಯಿಂದ ಕೊಡಿಗೇಹಳ್ಳಿ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಸಂಜೆ 5.30ರಿಂದ ರಾತ್ರಿ 8.30ವರೆಗೆ ಪ್ರತಿಭಟನೆ ನಡೆಯಿತು. ಮದ್ಯದಂಗಡಿ ತೆರೆಯಲು ಉದ್ದೇಶಿಸಿರುವ ಸ್ಥಳದ ಅಕ್ಕ–ಪಕ್ಕ ಶಾಲೆ, ದೇವಸ್ಥಾನವಲ್ಲದೆ, ವಸತಿ ಪ್ರದೇಶವಿದೆ. ಮದ್ಯದಂಗಡಿ ತೆರೆಯಲು ಈ ಹಿಂದೆಯೂ ಉದ್ದೇಶಿಸಿದ್ದಾಗ, ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಆಗ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬಾರ್‌ ತೆರೆಯದಿರುವ ಬಗ್ಗೆ ಭರವಸೆ ನೀಡಿದ್ದರು. ಆದರೆ, ಈಗ ಮದ್ಯದಂಗಡಿ ತೆರೆದಿದ್ದರಿಂದ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯ್ತಿ ಸದಸ್ಯರಾದ ಜಯಣ್ಣ, ಸಿದ್ದಗಂಗಮ್ಮ, ಚಿಕ್ಕರಾಜು, ಕೋಮಲಾ, ವಿಜಯಲಕ್ಷ್ಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಾವರೆಕೆರೆ ಪೊಲೀಸ್ ಇನ್‍ಸ್ಪೆಕ್ಟರ್ ನರೇಂದ್ರಬಾಬು ಸ್ಥಳಕ್ಕೆ ಬಂದು ಪ್ರತಿಭಟನೆಕಾರರ ಮನವೊಲಿಸಿ, ತೆರೆದಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.