ADVERTISEMENT

ಬೆಂಗಳೂರು | ಅಗ್ನಿಪಥ: ರೈಲುಗಳ ಸಂಚಾರ ರದ್ದು

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 20:00 IST
Last Updated 17 ಜೂನ್ 2022, 20:00 IST
ಅಗ್ನಿಪಥ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಿಂದ ಬೆಂಗಳೂರಿನಿಂದ ಹೊರಡಬೇಕಿದ್ದ ಮತ್ತು ಬೆಂಗಳೂರಿಗೆ ಬರಬೇಕಿದ್ದ ಹಲವು ರೈಲುಗಳು ರದ್ದಾದ ಕಾರಣ ಯಶವಂತಪುರ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನಾನುಕೂಲವಾಯಿತು  – ಪ್ರಜಾವಾಣಿ ಚಿತ್ರ
ಅಗ್ನಿಪಥ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಿಂದ ಬೆಂಗಳೂರಿನಿಂದ ಹೊರಡಬೇಕಿದ್ದ ಮತ್ತು ಬೆಂಗಳೂರಿಗೆ ಬರಬೇಕಿದ್ದ ಹಲವು ರೈಲುಗಳು ರದ್ದಾದ ಕಾರಣ ಯಶವಂತಪುರ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನಾನುಕೂಲವಾಯಿತು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಗ್ನಿಪಥ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ನಡೆಯುತ್ತಿರುವುದರಿಂದ ಬೆಂಗಳೂರಿನಿಂದ ಹೊರಡಬೇಕಿದ್ದ ಮತ್ತು ಬೆಂಗಳೂರಿಗೆ ಬರಬೇಕಿದ್ದ ಹಲವು ರೈಲುಗಳು ರದ್ದಾಗಿವೆ.

ಶನಿವಾರ ಹೊರಡಬೇಕಿದ್ದ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್) ರೈಲು ನಿಲ್ದಾಣದಿಂದ ಹೊರಡುವ ಕೆಎಸ್‌ಆರ್- ದಾನಾಪುರ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು(ಸಂಖ್ಯೆ 12295), ಯಶವಂತಪುರದಿಂದ ಭಗಲ್ಪುರಕ್ಕೆ ಹೊರಡುವ ವಾರದ ವಿಶೇಷ ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್‌ (12253), 20ರಂದು ಯಶವಂತಪುರದಿಂದ ಪಾಟಲಿಪುತ್ರಕ್ಕೆ ಹೊರಡುವ ವಾರದ ವಿಶೇಷ ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್‌ (22352) ರೈಲು ಸೇವೆ ರದ್ದುಗೊಳಿಸಲಾಗಿದೆ.

ಶುಕ್ರವಾರ ದಾನಾಪುರದಿಂದ ಕೆಎಸ್‌ಆರ್‌ಗೆ ಬರಲಿದ್ದ ಡೈಲಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ (12296), ಪಾಟಲಿಪುತ್ರದಿಂದ ಯಶವಂಪುರಕ್ಕೆ ಬರುವ ವಾರದ ಸೂಪರ್‌ ಫಾಸ್ಟ್ ಎಕ್ಸ್‌ಪ್ರೆಸ್ (22351) ರೈಲುಗಳು ರದ್ದುಗೊಂಡಿವೆ.

ADVERTISEMENT

ಇದೇ ರೀತಿ ಕೆಎಸ್‌ಆರ್‌ನಿಂದ ದಾನಾಪುರಕ್ಕೆ ಹೊರಟ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12295) ರೈಲು ಭಾಗಶಃ ರದ್ದಾಗಿದೆ. ಇನ್ನು ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ (22692) ರೈಲು ಚಾರ್ಲಪಲ್ಲಿ, ಮೌಲಾಲಿ, ಅಮ್ಮುಗುಡ ಹಾಲ್ಟ್‌ ಸನಾತನನಗರ ಮಾರ್ಗವಾಗಿ ಸಂಚರಿಸಲಿದೆ. ಹಾಗೆಯೇ ನ್ಯೂ ತಿನ್ಸುಕಿಯಾ- ಕೆಎಸ್‌ಆರ್ ವಾರದ ಸೂಪರ್‌ಫಾಸ್ಟ್‌ (22502) ರೈಲು ದಿಬ್ರುಘರ್, ನ್ಯೂ ಸಿಸಿಬೊರ್ಗಾಂವ್, ರಂಗಿಯಾ ಜಂಕ್ಷನ್ ಮೂಲಕ ಕಾರ್ಯಾಚರಣೆ ಮಾಡಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ರಾಜ್ಯದಿಂದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ನೆರೆ ರಾಜ್ಯಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸೇವೆ ಇದೆ. ಆದರೆ, ಇವುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ
ಆಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.