ADVERTISEMENT

ಸಾರ್ವಜನಿಕ ಶೌಚಾಲಯ ಸ್ವಚ್ಛತಾ ಸಿಬ್ಬಂದಿಗೆ ಸುರಕ್ಷತಾ ಸಾಮಗ್ರಿಗಳಿಲ್ಲ: ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 21:26 IST
Last Updated 22 ಜನವರಿ 2024, 21:26 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ನಗರದಲ್ಲಿ 48 ಸಾರ್ವಜನಿಕ ಶೌಚಾಲಯಗಳು ಅತ್ಯಂತ ದುಸ್ಥಿತಿಯಲ್ಲಿದ್ದು, ಅವುಗಳ ಸ್ವಚ್ಛತೆ ಕಾರ್ಯ ನಿರ್ವಹಿಸುವ ಸಿಬ್ಬಂದಿ ಸುರಕ್ಷತಾ ಸಾಮಗ್ರಿಗಳಿಲ್ಲದೆ ದಯನೀಯ ಸ್ಥಿತಿಯಲ್ಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

‘ಸ್ಟ್ಯಾಂಡ್‌4ಶೀ‘ ಉಪಕ್ರಮದ ಮುಖ್ಯಸ್ಥೆ ಕೆ.ಆರ್‌. ಅರ್ಚನಾ ನೇತೃತ್ವದಲ್ಲಿ 32 ಸ್ವಯಂಸೇವಕರ ತಂಡ ರಾಜಾಜಿನಗರ, ಜಯನಗರ, ಬಸವನಗುಡಿ, ಮಹಾಲಕ್ಷ್ಮಿ ಲೇಔಟ್‌, ಬಸವೇಶ್ವರನಗರ, ಚಿಕ್ಕಪೇಟೆ ಹಾಗೂ ಎಚ್‌ಎಸ್‌ಆರ್‌ ಲೇಔಟ್‌ಗಳಲ್ಲಿನ 48 ಶೌಚಾಲಯಗಳ ಸಮೀಕ್ಷೆ ನಡೆಸಿದೆ. 

ADVERTISEMENT

ಸಾರ್ವಜನಿಕ ಶೌಚಾಲಯಗಳಲ್ಲಿರುವ ಸ್ವಚ್ಛತಾ ಸಿಬ್ಬಂದಿಗೆ ಸುರಕ್ಷತಾ ಕವಚ, ಸಾಮಗ್ರಿಗಳನ್ನು ನೀಡಿಲ್ಲ. ನಿಗದಿತ ವೇತನ ಅಥವಾ ಗೌರವಧನ ಇಲ್ಲ. ನೀರಿನ ಕೊರತೆ ಇದ್ದು, ಅಡುಗೆ ಮಾಡಲು, ರಾತ್ರಿ ನಿದ್ರಿಸಲು ಪ್ರತ್ಯೇಕ ಸ್ಥಳಗಳಿಲ್ಲ ಎಂದು ಸಮೀಕ್ಷೆಯಲ್ಲಿ ಸಿಬ್ಬಂದಿ ಹೇಳಿಕೊಂಡಿದ್ದಾರೆ.

ಸುರಕ್ಷತಾ ಸಾಮಗ್ರಿಗಳು ಇಲ್ಲದಿರುವುದರಿಂದ ಚರ್ಮ ರೋಗದಂತಹ ಹಲವು ಅಲರ್ಜಿ ಸಮಸ್ಯೆಗಳನ್ನು ಸಿಬ್ಬಂದಿ ಎದುರಿಸುತ್ತಿದ್ದಾರೆ. ಈ ಕೆಲಸಗಾರರು ನಾಗರಿಕರು ನೀಡುವ ಹಣದ ಮೇಲೆ ಪೂರ್ಣ ಅವಲಂಬಿತರಾಗಿದ್ದಾರೆ. ನೀರಿನ ಕೊರತೆ ಶೌಚಾಲಯ ಗಲೀಜಿಗೆ ಕಾರಣವಾಗಿದ್ದು, ಇದರಿಂದ ನಾಗರಿಕರ ಕೋಪಕ್ಕೂ ಗುರಿಯಾಗಬೇಕಿದೆ ಎಂದು ಹೇಳಲಾಗಿದೆ.

‘ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯನ್ನು ಹೊರಗುತ್ತಿಗೆದಾರರಿಗೆ ವಹಿಸಲಾಗಿದೆ. ಸ್ವಚ್ಛತಾ ಸಿಬ್ಬಂದಿಗೆ ಹಣ ನೀಡುವುದು ಗುತ್ತಿಗೆದಾರರ ಜವಾಬ್ದಾರಿ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.