ADVERTISEMENT

ಪಿಯುಸಿ: ಪಿಇಎಸ್‌ ಕಾಲೇಜಿಗೆ ಶೇ 98.86 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2024, 15:24 IST
Last Updated 10 ಏಪ್ರಿಲ್ 2024, 15:24 IST
ಧೀರಜ್‌ ಎಸ್‌.
ಧೀರಜ್‌ ಎಸ್‌.   

ಬೆಂಗಳೂರು: ಹನುಮಂತನಗರದ ಪಿಇಎಸ್‌ ಪಿಯು ಕಾಲೇಜು ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 98.86 ಫಲಿತಾಂಶ ಪಡೆದಿದೆ. ವಾಣಿಜ್ಯ ವಿಭಾಗದಲ್ಲಿ 16 ಮತ್ತು ವಿಜ್ಞಾನ ವಿಭಾಗದಲ್ಲಿ 17 ವಿದ್ಯಾರ್ಥಿಗಳು ಶೇ 95ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 243 ವಿದ್ಯಾರ್ಥಿಗಳಲ್ಲಿ 241 ಮಂದಿ (ಶೇ 99.22) ಉತ್ತೀರ್ಣರಾಗಿದ್ದಾರೆ. 24 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಶೇ 100 ಅಂಕ ಪಡೆದಿದ್ದಾರೆ. ಧೀರಜ್ ಎಸ್‌. 595 (ಶೇ 99.2) ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ 392 ವಿದ್ಯಾರ್ಥಿಗಳಲ್ಲಿ 386 ಮಂದಿ (ಶೇ 98.5) ಉತ್ತೀರ್ಣರಾಗಿದ್ದಾರೆ. 20 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಶೇ 100 ಅಂಕ ಗಳಿಸಿದ್ದಾರೆ. ಅಪೂರ್ವ ಎನ್‌. 595 (99.2) ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ 95ಕ್ಕಿಂತ ಅಧಿಕ ಅಂಕಗಳಿಸಿದವರ ವಿವರ ಇಲ್ಲಿದೆ;

ವಾಣಿಜ್ಯ ವಿಭಾಗ: ಧೀರಜ್‌ ಎಸ್‌. (ಶೇ 99.2), ಪವಿತ್ರಾ ಪಿ. (ಶೇ 98.7), ಲಾವಣ್ಯ ಡಿ. (ಶೇ 98), ವಿ. ಸಂಜಯ್‌ಪ್ರಸನ್ನ ಸಿಂಹ (ಶೇ 97.8), ಸುಕೃತಿ ಆರ್‌. ಭಟ್‌ (ಶೇ 97.7), ಸ್ಕಂದ ಪ್ರಣವ್ ಎಸ್‌. (ಶೇ 97.3), ಅಪೂರ್ವ 583 (ಶೇ 97.2), ಸಿಂಚನಾ ಜೆ. ರಾಮ್‌ (ಶೇ 96.7), ಎಂ. ಅಮೃತಾ (ಶೇ 96.7), ನಿಖಿತಾ ಎಸ್‌. (ಶೇ 96.7), ಧನುಶ್ರೀ ಕೆ.ಕೆ. (ಶೇ 96.5), ಕಾವ್ಯ ಎಂ. (ಶೇ 96.5), ಭಾನುಶ್ರೀ (ಶೇ 96.3), ರಚನಾ ಬಿ.ಸಿ. (ಶೇ 96.3).

ADVERTISEMENT

ವಿಜ್ಞಾನ ವಿಭಾಗ: ಅಪೂರ್ವ ಎನ್‌. (ಶೇ 99.2), ಕುಶಾಲ್‌ ಎಂ. (ಶೇ 98), ಭವನ್‌ ಪಿ. (ಶೇ 97.7), ಮಣಿಕಾಂತ ಎಂ. ಗೌಡ (ಶೇ 97.2), ಮಾನಸ ಜೆ.ಎ. (ಶೇ 97) ನಿಷ್ಕಾ ವಿ. (ಶೇ 96.8), ಶ್ರಾವ್ಯ ಬಿ.ಎಲ್‌. (ಶೇ 96.8), ವಿ. ಹಾರ್ದಿಕ್‌ ನಾಯ್ಡು (ಶೇ 96.8), ಮೃದುಲಾ ಡಿ. (ಶೇ 96.7), ಉತ್ತಮ್‌ ಪಿ. (ಶೇ 96), ಸಮೀಕ್ಷಾ ಎಂ.ಎಸ್‌. (ಶೇ 96), ಶಾಂಭವಿ ಕೆ. ಚೈತನ್ಯ (ಶೇ 96), ಶ್ರೇಯಾ ಬಿ.ಎಸ್. ಗೌಡ (ಶೇ 96), ಸನ್ನಿಧಿ ಎ. ಶೆಟ್ಟಿ (ಶೇ 95.8), ಪ್ರಿಯಾಂಕ ಗುರ್ಜರ್‌ (ಶೇ 95.8), ಪ್ರಿಯಾಂಕ ಎಸ್‌. (ಶೇ 95.8), ಸಂಜನಾ ಎಸ್‌. (ಶೇ 95.7).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.