ಬೆಂಗಳೂರು: ಇಲ್ಲಿನ ಚಿತ್ರಕಲಾ ಪರಿಷತ್‌ನಲ್ಲಿ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಪ್ರಯುಕ್ತ ಗುರುವಾರ ಆರಂಭವಾದ ತೇಜಸ್ವಿ ಲೋಕ–10ರ ಮಾಲಿಕೆಯ ‘ಕಪ್ಪೆಲೋಕ’ ಮೊದಲ ದಿನವೇ ವಿದ್ಯಾರ್ಥಿಗಳು, ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ಸೆಳೆಯಿತು.
ಪರಿಸರ ಕುರಿತು ಕುತೂಹಲ ಹೊಂದಿದ್ದ ತೇಜಸ್ವಿ, ತಮ್ಮ ಜೀವಿತದುದ್ದಕ್ಕೂ ತಾವು ಕಂಡ ಜೀವ ವೈವಿಧ್ಯವನ್ನು ಕ್ಯಾಮೆರಾ ಕಣ್ಣಿನ ಮೂಲಕ ಸೆರೆ ಹಿಡಿದಿದ್ದರು. ಅಂಥ ಚಿತ್ರಗಳ ಸರಣಿಯಲ್ಲಿ ಕಪ್ಪೆಗಳೂ ಪ್ರಾಶಸ್ತ್ಯ ಪಡೆದಿವೆ.ಅವರ ಆಶಯದಂತೆ ಜನರಲ್ಲಿ ಪರಿಸರ ಸಂವರ್ಧನೆಯ ಜವಾಬ್ದಾರಿಯನ್ನು ಜಾಗೃತವಾಗಿಸಲು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಪರಿಸರ, ನಿಸರ್ಗ ಸಂರಕ್ಷಣಾ ಸಂಸ್ಥೆ ಪ್ರತಿ ವರ್ಷ ‘ತೇಜಸ್ವಿ ಜೀವಲೋಕ’ ಆಯೋಜಿಸುತ್ತಿದೆ.
ಹಕ್ಕಿಲೋಕ, ಕೀಟಲೋಕ, ಜೇಡಲೋಕ, ಬಾವಲಿಲೋಕ, ಕುರಿಂಜಿಲೋಕ ಸರಣಿಗಳಲ್ಲಿ ಈ ಬಾರಿಯ ಕಪ್ಪೆಲೋಕ ವಿಶಿಷ್ಟವಾಗಿತ್ತು.ಪ್ರದರ್ಶನ ಸೆ.18ರ ವರೆಗೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.