ADVERTISEMENT

ರಾಜ್ಯ ಪೊಲೀಸ್‌ ಇಲಾಖೆ | ಸುವರ್ಣ ಸಂಭ್ರಮ: ಓಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 15:54 IST
Last Updated 20 ಫೆಬ್ರುವರಿ 2024, 15:54 IST
<div class="paragraphs"><p> ಓಟದ ಸ್ಪರ್ಧೆ</p></div>

ಓಟದ ಸ್ಪರ್ಧೆ

   

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆ, ಸುವರ್ಣ ಮಹೋತ್ಸವದ ಅಂಗವಾಗಿ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ಸಹಯೋಗದಲ್ಲಿ 5 ಹಾಗೂ 10 ಕಿ.ಮೀ ಓಟದ ಸ್ಪರ್ಧೆ ಆಯೋಜಿಸಲಾಗಿದೆ.

‘ಫಿಟ್‌ನೆಸ್‌ ಫಾರ್‌ ಆಲ್‌’ ಶೀರ್ಷಿಕೆ ಅಡಿ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಈ ಓಟದ ಮೂಲಕ ಮಾದಕ ವಸ್ತು ಮುಕ್ತ ಕರ್ನಾಟಕ ಪ್ರಚಾರಪಡಿಸಲು ಉದ್ದೇಶಿಸಲಾಗಿದೆ ಎಂದು ಪೊಲೀಸ್‌ ಇಲಾಖೆ ಪ್ರಕಟಣೆ ತಿಳಿಸಿದೆ.

ADVERTISEMENT

ಸ್ಪರ್ಧೆಗೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಷ್ಟ್ರದಾದ್ಯಂತ ಎಲ್ಲ ವಯೋಮಾನದ ಸುಮಾರು 10 ಸಾವಿರ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿಧಾನಸೌಧದ ಮುಂಭಾಗದಿಂದ ಓಟ ಆರಂಭಗೊಂಡು ಕಬ್ಬನ್‌ ಉದ್ಯಾನದ ಮೂಲಕ ಹಾದು ಹೋಗಲಿದೆ. ಈ ಓಟವು ಹಸಿರು ಬೆಂಗಳೂರು, ಮಾದಕ ವಸ್ತು ಮುಕ್ತ ಕರ್ನಾಟಕ ಹಾಗೂ ಸೈಬರ್‌ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಲಿದೆ. ಓಟ ನಡೆಯುವ ಆಯ್ದ ಸ್ಥಳಗಳಲ್ಲಿ ಪೊಲೀಸ್‌ ಬ್ಯಾಂಡ್‌ ತಂಡವು ಪ್ರದರ್ಶನ ನೀಡಲಿದೆ ಎಂದು ಮಾಹಿತಿ ನೀಡಿದೆ.

5 ಹಾಗೂ 10 ಕಿ.ಮೀ ಓಟದಲ್ಲಿ ಮೂರು ಪ್ರತ್ಯೇಕ (ಸುಮಾರು ₹ 18 ಲಕ್ಷ) ಬಹುಮಾನ ನೀಡಲಾಗುವುದು. ಹಿರಿಯ ನಾಗಕರಿಕರು, ಹವ್ಯಾಸಿ ಹಾಗೂ ವೃತ್ತಿಪರ ಓಟಗಾರರು ಪಾಲ್ಗೊಳ್ಳಬಹುದು. ಸ್ಪರ್ಧಿಗಳಿಗೆ ಟೀ–ಶರ್ಟ್‌, ಪದಕ ಹಾಗೂ ಉಪಾಹಾರದ ವ್ಯವಸ್ಥೆಯಿದೆ. ಆಸಕ್ತರು ವೆಬ್‌ಸೈಟ್‌: www.click2race.comನಲ್ಲಿ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.