ADVERTISEMENT

ರೈಲಿನಲ್ಲಿ ಫಲಕದಲ್ಲಿ ಕನ್ನಡ ಮಾಯ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 19:51 IST
Last Updated 5 ನವೆಂಬರ್ 2019, 19:51 IST
ಸೋಲಾಪುರ–ಬೆಂಗಳೂರು ರೈಲಿನಲ್ಲಿ ಕನ್ನಡ ಇಲ್ಲದ ಫಲಕ
ಸೋಲಾಪುರ–ಬೆಂಗಳೂರು ರೈಲಿನಲ್ಲಿ ಕನ್ನಡ ಇಲ್ಲದ ಫಲಕ   

ಬೆಂಗಳೂರು: ಸೋಲಾಪುರ–ಬೆಂಗಳೂರು ರೈಲಿನಲ್ಲಿ ಕನ್ನಡ ಇಲ್ಲದ ಫಲಕಗಳು ರಾರಾಜಿಸುತ್ತಿವೆ.

ಬೋಗಿಗಳಲ್ಲಿರುವ ಪ್ರಯಾಣಿಕ ಮಾರ್ಗಸೂಚಿ ಫಲಕಗಳಲ್ಲಿ ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸೂಚನೆಗಳಿವೆ. ಮಹಾರಾಷ್ಟ್ರದ ಸೋಲಾಪುರಕ್ಕೆ ಹೋಗುವ ಈ ರೈಲಿನಲ್ಲಿ ದಕ್ಷಿಣ ರೈಲ್ವೆಯಿಂದ ಹಾಕಿರುವ ಫಲಕದಲ್ಲಿ ಮಲಯಾಳಂ ಭಾಷೆ ಇದೆ.

‘ನೈರುತ್ಯ ರೈಲ್ವೆಯಲ್ಲಿ ಹಿಂದಿ, ಇಂಗ್ಲಿಷ್ ಜತೆಗೆ ಕನ್ನಡ ಭಾಷೆ ಇರುತ್ತದೆ. ಇದು ದಕ್ಷಿಣ ರೈಲ್ವೆಯ ಫಲಕವಾಗಿರುವ ಕಾರಣ ಮಲಯಾಳಂನಲ್ಲಿದೆ’ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದರು.

ADVERTISEMENT

ಸೋಲಾಪುರ–ಬೆಂಗಳೂರು ರೈಲಿನಲ್ಲಿ ದಕ್ಷಿಣ ರೈಲ್ವೆಯ ಕೆಲ ಬೋಗಿಗಳು ಸಂಯೋಜನೆಗೊಂಡಿರಬಹುದು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.