ADVERTISEMENT

ಬೆಂಗಳೂರು ರೈಲು ನಿಲ್ದಾಣ ಸ್ಫೋಟ: ಜೆಇಎಂ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 20:35 IST
Last Updated 15 ಸೆಪ್ಟೆಂಬರ್ 2019, 20:35 IST
   

ಚಂಡೀಗಡ (ಪಿಟಿಐ): ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ರೈಲು ನಿಲ್ದಾಣಗಳ ಮೇಲೆ ಅಕ್ಟೋಬರ್‌ 8ರಂದು ಬಾಂಬ್‌ ದಾಳಿ ನಡೆಸುವುದಾಗಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್‌–ಎ–ಮೊಹಮ್ಮದ್‌ (ಜೆಇಎಂ) ಬೆದರಿಕೆ ಹಾಕಿದೆ.

ಜೆಇಎಂ ಕಳಿಸಿದೆ ಎನ್ನಲಾದ, ಹಿಂದಿಯಲ್ಲಿರುವ ಪತ್ರವೊಂದು ರೋಹ್ಟಕ್‌ ರೈಲ್ವೆ ಪೊಲೀಸ್‌ ಠಾಣೆಗೆ ಬಂದಿದೆ. ಪತ್ರದಲ್ಲಿ ಮಸೂದ್‌ ಅಹ್ಮದ್ ಎಂಬ ವ್ಯಕ್ತಿಯ ಸಹಿ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮುಂಬೈ, ಚೆನ್ನೈ ಹರಿಯಾಣದ ರೋಹ್ಟಕ್‌, ರೇವಾರಿ, ಹಿಸ್ಸಾರ್‌ ಹಾಗೂ ರಾಜಸ್ಥಾನದ ಕೆಲವು ರೈಲು ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ’ ಎನ್ನಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.