ಬೆಂಗಳೂರು: ಕೆಲವು ದಿನಗಳ ಬಿಡುವಿನ ನಂತರ ನಗರದಲ್ಲಿ ಗುರುವಾರ ಮತ್ತೆ ಮಳೆ ಆರಂಭವಾಯಿತು. ಜಿಕೆವಿಕೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ಕೃಷಿಮೇಳದ ಉತ್ಸಾಹಕ್ಕೆ ನೀರೆರಚಿತು. ಹಲವು ಕಡೆಗಳಲ್ಲಿ ರಸ್ತೆಗಳಲ್ಲೇ ನೀರು ಹರಿಯಿತು.
ಹೆಬ್ಬಾಳದಲ್ಲಿ ರಸ್ತೆಯಲ್ಲೇ ನೀರು ಹರಿದ ಕಾರಣ ಏರ್‌ಪೋರ್ಟ್ ಕಡೆಗೆ ಸಾಗುವ ವಾಹನಗಳಿಗೆ ತೊಡಕಾಯಿತು. ಎಂ.ಜಿ. ರಸ್ತೆ, ರಾಜಾಜಿನಗರ, ಕಬ್ಬನ್ ಪಾರ್ಕ್, ಶಾಂತಿನಗರ, ಜಯನಗರ, ರಾಜರಾಜೇಶ್ವರಿ ನಗರ, ಕೆ.ಆರ್. ಮಾರ್ಕೆಟ್, ಕಾರ್ಪೊರೇಷನ್ ಸರ್ಕಲ್, ಮೈಸೂರು ರಸ್ತೆ, ವಿಜಯನಗರ, ಮಾಗಡಿ ರಸ್ತೆ, ಮಲ್ಲೇಶ್ವರ, ಯಶವಂತಪುರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ.
1 ಸೆಂ.ಮೀ.ಗಿಂತ ಅಧಿಕ ಮಳೆ: ದೊಡ್ಡಬಿದರಕಲ್ಲು 1.3 ಸೆಂ.ಮೀ., ಚೌಡೇಶ್ವರಿ 1.05 ಸೆಂ.ಮೀ., ಬಾಗಲಗುಂಟೆ 1 ಸೆಂ.ಮೀ., ಪೀಣ್ಯ ಕೈಗಾರಿಕಾ ವಲಯ 1 ಸೆಂ.ಮೀ. ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.