ADVERTISEMENT

ಟ್ರಾಫಿಕ್ ಪೊಲೀಸರಿಗೆ 1400 ರೈನ್ ಕೋಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 5:55 IST
Last Updated 24 ಸೆಪ್ಟೆಂಬರ್ 2024, 5:55 IST
<div class="paragraphs"><p>ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ರೈನ್ ಕೋಟ್</p></div>

ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ರೈನ್ ಕೋಟ್

   

ಬೆಂಗಳೂರು: ಭಾರತದ ಮುಂಚೂಣಿಯ ಟ್ರೇಡಿಂಗ್ ಮತ್ತು ಹೂಡಿಕೆಯ ಪ್ಲಾಟ್‌ಫಾರಂ ಫೈಯರ್ಸ್ (FYERS) ಬೆಂಗಳೂರಿನ ಟ್ರಾಫಿಕ್ ಪೊಲೀಸರಿಗೆ 1400ಕ್ಕೂ ಹೆಚ್ಚು ರೈನ್ ಕೋಟ್‌ಗಳನ್ನು ವಿತರಿಸಿದೆ.

ಫೈಯರ್ಸ್ ಫೌಂಡೇಷನ್ ಈ ರೈನ್ ಕೋಟ್‌ಗಳನ್ನು ಅಧಿಕೃತವಾಗಿ ಉತ್ತರ ಬೆಂಗಳೂರಿನ ಡಿಸಿಪಿ ಸಿರಿ ಗೌರಿ ಡಿ.ಆರ್. ಅವರಿಗೆ ಫೈಯರ್ಸ್ ಸಹ-ಸಂಸ್ಥಾಪಕ ಮತ್ತು ಸಿಇಒ ತೇಜಸ್ ಖೋಡೇ ಅವರ ನೇತೃತ್ವದ ಸಂಸ್ಥಾಪಕರು ಹಸ್ತಾಂತರಿಸಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಟ್ರಾಫಿಕ್ ಅಧಿಕಾರಿಗಳು ಸವಾಲು ಎದುರಿಸುತ್ತಿದ್ದು, ಅತಿಯಾದ ಮಳೆಯಿಂದ ಅವರಿಗೆ ರಕ್ಷಣೆ ನೀಡಿ, ಟ್ರಾಫಿಕ್ ಸಂಚಾರ ಮತ್ತು ಸಾರ್ವಜನಿಕರ ಸುರಕ್ಷತೆಯ ಉಪಕ್ರಮಗಳಿಗೆ ನೆರವಾಗಲು, ರೈನ್ ಕೋಟ್‌ಗಳು ಅಗತ್ಯ. “ನಮ್ಮ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ರಸ್ತೆಗಳನ್ನು ಸುರಕ್ಷಿತವಾಗಿರಿಸಲು ದಣಿವಿರದೆ ಶ್ರಮಿಸುತ್ತಾರೆ. ಅವರಿಗೆ ರೈನ್ ಕೋಟ್‌ಗಳನ್ನು ಪೂರೈಸುವ ಮೂಲಕ ಅವರ ಬದ್ಧತೆಗೆ ನಮ್ಮ ಕೃತಜ್ಞತೆ ತೋರುವ ಕೆಲಸವಿದು” ಎಂದು ತೇಜ್ ಖೋಡೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.