ADVERTISEMENT

ಬೆಂಗಳೂರು: ಜಿಟಿ ಜಿಟಿ ಮಳೆ; ಮೈನಡುಗಿಸಿದ ಚಳಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 19:45 IST
Last Updated 12 ನವೆಂಬರ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಶುಕ್ರವಾರವೂ ಜಿಟಿ ಜಿಟಿ ಮಳೆ ಸುರಿಯಿತು. ಹೀಗಾಗಿ ದಿನವಿಡೀ ಚಳಿಯ ವಾತಾವರಣ ನಿರ್ಮಾಣವಾಗಿತ್ತು.

ಮುಂಜಾವಿನಿಂದಲೇ ಮುಗಿಲಲ್ಲಿ ಕಾರ್ಮೋಡ ದಟ್ಟೈಸಿತ್ತು. ಆಗಾಗ ತುಂತುರು ಮಳೆಯ ಸಿಂಚನವಾಗುತ್ತಿತ್ತು. ಹೀಗಾಗಿ ಶಾಲಾ, ಕಾಲೇಜು ಹಾಗೂ ಕಚೇರಿಗೆ ತೆರಳುವವರು ಬೆಚ್ಚನೆಯ ಉಡುಪು ಧರಿಸಿ ರಸ್ತೆಗಿಳಿದಿದ್ದ ದೃಶ್ಯ ಕಂಡುಬಂತು. ಕೆಲವರು ಮಳೆಯಿಂದ ರಕ್ಷಣೆ ಪಡೆಯಲು ಕೊಡೆಗಳ ಮೊರೆ ಹೋಗಿದ್ದರು. ಮೈ ನಡುಗಿಸುತ್ತಿದ್ದ ಚಳಿಯಿಂದ ತಪ್ಪಿಸಿಕೊಳ್ಳಲು ಕಿವಿಗೆ ಹತ್ತಿ ಹಾಗೂ ಕಿವಿ ಮುಚ್ಚುವ ಟೋಪಿಗಳನ್ನು ಧರಿಸಿ ಓಡಾಡುತ್ತಿದ್ದರು.

ನಿರಂತರ ಮಳೆಯಿಂದಾಗಿ ಕೆಲವೆಡೆ ರಸ್ತೆಯಲ್ಲಿ ಮಳೆ ನೀರು ಹರಿಯಿತು. ಶಿವಾನಂದ ವೃತ್ತ, ಗೂಡ್‌ಶೆಡ್‌ ರಸ್ತೆ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಭೂಗತ ಕೇಬಲ್‌ ಅಳವಡಿಕೆ ಕಾರ್ಯ ಹಾಗೂ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು ಅಲ್ಲಲ್ಲಿ ತೋಡಿದ್ದ ಗುಂಡಿಗಳಲ್ಲಿ ನೀರು ಸಂಗ್ರಹವಾಗಿತ್ತು. ರಸ್ತೆಗಳೂ ಕೆಸರುಮಯವಾಗಿದ್ದವು. ಹೀಗಾಗಿ ಪಾದಚಾರಿಗಳು ಪರದಾಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.