ADVERTISEMENT

ಬೆಂಗಳೂರು ನಗರದ ಹಲವೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 16:14 IST
Last Updated 15 ನವೆಂಬರ್ 2024, 16:14 IST
ಮಲ್ಲೇಶ್ವರದಲ್ಲಿ ನಡೆದ ಕಡಲೆಕಾಯಿ ಪರಿಷೆ ಸಂದರ್ಭದಲ್ಲಿ ಮಳೆ ಬಂದಾಗ ವ್ಯಾಪಾರಿಗಳು ಪ್ಲಾಸ್ಟಿಕ್‌ ಹೊದಿಕೆಗಳಿಂದ ಕಡಲೆಕಾಯಿ ಮುಚ್ಚಿದ್ದರು. ನಾಗರಿಕರು ಛತ್ರಿ ಹಿಡಿದು ಸಾಗಿದರು
ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ್‌
ಮಲ್ಲೇಶ್ವರದಲ್ಲಿ ನಡೆದ ಕಡಲೆಕಾಯಿ ಪರಿಷೆ ಸಂದರ್ಭದಲ್ಲಿ ಮಳೆ ಬಂದಾಗ ವ್ಯಾಪಾರಿಗಳು ಪ್ಲಾಸ್ಟಿಕ್‌ ಹೊದಿಕೆಗಳಿಂದ ಕಡಲೆಕಾಯಿ ಮುಚ್ಚಿದ್ದರು. ನಾಗರಿಕರು ಛತ್ರಿ ಹಿಡಿದು ಸಾಗಿದರು ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ್‌   

ಬೆಂಗಳೂರು: ನಗರದಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದು, ಆಗಾಗ ಬಿರುಸಿನ ಮಳೆಯಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಶುಕ್ರವಾರ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಹಾಗೂ ಸಂಜೆ ವೇಳೆಯಲ್ಲಿ ಹೆಚ್ಚು ಮಳೆಯಾಯಿತು. ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಅಲ್ಲದೆ, ಕೃಷಿ ಮೇಳ ಹಾಗೂ ಮಲ್ಲೇಶ್ವರದಲ್ಲಿ ನಡೆದ ಕಡಲೆಕಾಯಿ ಪರಿಷೆಗೆ ಒಂದಷ್ಟು ಅಡ್ಡಿಯಾಯಿತು.

ವಿದ್ಯಾಪೀಠ, ಯಲಹಂಕ, ಸಂಪ‍ಂಗಿರಾಮನಗರ, ನಂದಿನಿ ಲೇಔಟ್‌, ಪುಲಕೇಶಿ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ಸೆಂ.ಮೀಗೂ ಹೆಚ್ಚಿನ ಮಳೆಯಾಯಿತು. ಉಳಿದ ಬಹುತೇಕ ಪ್ರದೇಶದಲ್ಲಿ ಸಾಧಾರಣ ಮಳೆಯಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.