ADVERTISEMENT

ಬೆಂಗಳೂರು: ಕೆಲವೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 16:30 IST
Last Updated 30 ಅಕ್ಟೋಬರ್ 2024, 16:30 IST
<div class="paragraphs"><p>ಮಲ್ಲೇಶ್ವರದ 8ನೇ ಅಡ್ಡರಸ್ತೆಯಲ್ಲಿ ಜನರು ತುಂತುರು ಮಳೆಯಲ್ಲಿಯೇ ಖರೀದಿ ನಡೆಸಿದರು</p></div>

ಮಲ್ಲೇಶ್ವರದ 8ನೇ ಅಡ್ಡರಸ್ತೆಯಲ್ಲಿ ಜನರು ತುಂತುರು ಮಳೆಯಲ್ಲಿಯೇ ಖರೀದಿ ನಡೆಸಿದರು

   

ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್

ಬೆಂಗಳೂರು: ಒಂದು ವಾರದಿಂದ ಬಿಡುವು ನೀಡಿದ್ದ ಮಳೆ, ನಗರದ ಕೆಲವು ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನ ಸುರಿಯಿತು.

ADVERTISEMENT

ಮಳೆ ನೀರು ರಸ್ತೆಯಲ್ಲೇ ನಿಂತಿದ್ದರಿಂದ ಹಲವು ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಹೆಬ್ಬಾಳ ಜಂಕ್ಷನ್‌ನ ಸುತ್ತಮುತ್ತಲಿನ ರಸ್ತೆಗಳು, ಸುಮನಹಳ್ಳಿ ಜಂಕ್ಷನ್‌, ವೀರಸಂದ್ರದಿಂದ ಹೊಸೂರು ರಸ್ತೆ, ಬಾಗಲೂರು ಕ್ರಾಸ್‌ ಅಂಡರ್‌ಪಾಸ್‌, ಓಕಳಿಪುರದ ರೈಲ್ವೆ ಕೆಳಸೇತುವೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿತ್ತು.

ಹೆಮ್ಮಿಗೆಪುರದಲ್ಲಿ ಅತಿಹೆಚ್ಚು (3 ಸೆಂ.ಮೀ) ಮಳೆಯಾಯಿತು. ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ 2.8 ಸೆಂ.ಮೀ, ಬಸವೇಶ್ವರನಗರದಲ್ಲಿ 2.8 ಸೆಂ.ಮೀ, ನಂದಿನಿಲೇಔಟ್‌ 2.5 ಸೆಂ.ಮೀ, ನಾಗಪುರದಲ್ಲಿ 2.2 ಸೆಂ.ಮೀ, ಮಾರುತಿ ಮಂದಿರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ 2 ಸೆಂ.ಮೀ ಮಳೆಯಾಗಿದೆ. ರಾಜರಾಜೇಶ್ವರಿನಗರ, ರಾಜಾಜಿನಗರ, ಶೆಟ್ಟಿಹಳ್ಳಿ, ಹೇರೋಹಳ್ಳಿ, ಕಾಟನ್‌ಪೇಟೆ, ಕೆಂಗೇರಿಯಲ್ಲಿ ಸಾಧಾರಣ ಮಳೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.