ಬೆಂಗಳೂರು: ರಾಜಾಜಿನಗರದ ಬಿಬಿಎಂಪಿ ಉದ್ಯಾನದಲ್ಲಿ ಮರ ಬಿದ್ದು ಲಕ್ಷ್ಮಣ್ ಎಂಬುವವರು ಮೃತಪಟ್ಟಿದ್ದಾರೆ.
ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವಾಹನದ ಚಾಲಕನಾಗಿರುವ ಲಕ್ಷ್ಮಣ್ (30) ಅವರು ನವರಂಗ್ ಚಿತ್ರಮಂದಿರದ ಬಳಿಯ ಉದ್ಯಾನದಲ್ಲಿ ಭಾನುವಾರ ಮಲಗಿದ್ದರು. ಆಗ ಮರವೊಂದು ಅವರ ಮೇಲೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾಜಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.