ರಾಜರಾಜೇಶ್ವರಿನಗರ: ಆರ್.ಆರ್. ನಗರ ಕ್ಷೇತ್ರದ ಜ್ಞಾನಭಾರತಿ ವಾರ್ಡ್‌ನ ರಾಜೀವ್‍ಗಾಂಧಿ ನಗರ (ಕೆಬ್ಬೆಹಳ್ಳ) ಕುಡಿಯುವ ನೀರಿಗಾಗಿ ಜನರು ಬಿಂದಿಗೆ ಹಿಡಿದು ಚಾತಕ ಪಕ್ಷಿಯಂತೆ ಕಾಯಬೇಕಾಗಿದೆ. ಯಾರಾದರೂ ನೀರಿನ ಟ್ಯಾಂಕರ್ ಉಚಿತವಾಗಿ ಕಳುಹಿಸಿದಾಗ ನೀರಿಗಾಗಿ ನೂಕುನುಗ್ಗಲು ಉಂಟಾಗುತ್ತಿದೆ.
‘ಕೂಗಳತೆಯ ದೂರದಲ್ಲಿರುವ ನಾಗರಬಾವಿ, ಅನ್ನಪೂರ್ಣೇಶ್ವರಿನಗರ ಮತ್ತು ನಾಗರಬಾವಿಯ ಬಿಡಿಎ ಪ್ರದೇಶದ ವ್ಯಾಪ್ತಿಯ ಜನರಿಗೆ ಮನೆಮನೆಗೆ ಮೂರು ದಿನಕ್ಕೊಮ್ಮೆ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಬಡವರು ವಾಸಿಸುವ ಮನೆಗಳಿಗೆ ಕಾವೇರಿ ನೀರು ಬರುತ್ತಿಲ್ಲ. ತಾತ್ಕಾಲಿಕ ನೀರು ಪೂರೈಸಲು ಜಲಮಂಡಳಿ ಅಲ್ಲಲ್ಲಿ ನೀರಿನ ಟ್ಯಾಂಕ್‌ಗಳನ್ನು ಇಟ್ಟಿದ್ದಾರೆ. ಮುಂಜಾನೆ ಒಂದು ಬಾರಿ ಲಾರಿಯಲ್ಲಿ ತಂದು ನೀರು ಸುರಿದು ಹೋಗುತ್ತಾರೆ. ಒಂದು ಟ್ಯಾಂಕ್ ನೀರು ನಮಗೆ ಯಾವುದಕ್ಕೂ ಸಾಕಾಗುವುದಿಲ್ಲ’ ಎಂದು ಮಹಿಳೆಯರು ದೂರಿದರು.
‘ಕೂಲಿ ಕಾಮಿರ್ಕರು, ಬಡವರು, ಸಣ್ಣ ಕೈಗಾರಿಕೆಗಳಲ್ಲಿ ದುಡಿದು ಜೀವನ ಸಾಗಿಸುವ ನಿವಾಸಿಗಳಿಗೆ ಕಾವೇರಿ ನೀರು, ಮೂಲ ಸೌಕರ್ಯಗಳು ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ತಾತ್ಕಾಲಿಕ ವ್ಯವ್ಯವಸ್ಥೆ: ರಾಜೀವ್‍ಗಾಂಧಿ ನಗರ ಸುತ್ತಮುತ್ತ ಪ್ರತಿ ರಸ್ತೆಗೆ ತಾತ್ಕಾಲಿಕವಾಗಿ ನೀರಿನ ಟ್ಯಾಂಕ್‍ಗಳನಿಟ್ಟು ಲಾರಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇಂದಿನಿಂದ ಬೆಳಿಗ್ಗೆ ಜೊತೆಗೆ, ಸಂಜೆಯೂ ನೀರು ಪೂರೈಕೆ ಮಾಡಲಾಗುವುದು’ ಎಂದು ಬೆಂಗಳೂರು ಜಲಮಂಡಳಿ ನಾಗರಬಾವಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹರಿಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.