ADVERTISEMENT

ರಾಜ್ಯೋತ್ಸವ ಪ್ರಶಸ್ತಿ | ಅಂಗವಿಕಲರಿಗೆ ವಯೋಮಿತಿ ಸಡಿಲಿಸಿ: ಸರ್ಕಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 15:51 IST
Last Updated 31 ಆಗಸ್ಟ್ 2024, 15:51 IST
   

ಬೆಂಗಳೂರು: ‘ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಆಯ್ಕೆಗೆ ನಿಗದಿಪಡಿಸಲಾದ ವಯೋಮಿತಿ ನಿರ್ಬಂಧವನ್ನು ಅಂಗವಿಕಲರಿಗೆ ಸಡಿಲಿಸಬೇಕು’ ಎಂದು ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಸರ್ಕಾರಕ್ಕೆ ಮನವಿ ಮಾಡಿದೆ. 

ಈ ಬಗ್ಗೆ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಪತ್ರ ಬರೆದಿದ್ದಾರೆ. 

‘ರಾಜ್ಯೋತ್ಸವ ಪ್ರಶಸ್ತಿಗೆ ಸೆ.1ರಿಂದ ಸೆ.30ರವರೆಗೆ ಸಾಧಕರ ಹೆಸರನ್ನು ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕ್ರೀಡಾ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರದ ಸಾಧಕರು 60 ವರ್ಷ ಮೇಲ್ಪಟ್ಟವರಾಗಿರಬೇಕೆಂಬ ನಿರ್ಬಂಧವಿದೆ. ಪ್ರಸ್ತುತ 21 ಬಗೆಯ ಅಂಗವಿಕಲತೆಗಳಿವೆ. ಕೆಲ ವಿಧದ ಅಂಗವಿಕಲತೆಯಿಂದ ಬಳಲುತ್ತಿರುವವರು ವಯಸ್ಸಾಗುತ್ತಿದಂತೆ ದೈಹಿಕ ಸಾಮರ್ಥ್ಯ ಕಳೆದುಕೊಂಡು, ಹಾಸಿಗೆ ಹಿಡಿಯುತ್ತಾರೆ. ಇಂತಹ ಅಂಗವಿಕಲ ಸಾಧಕರಿಗೂ ಅರ್ಜಿ ಸಲ್ಲಿಸಿ, ಪ್ರಶಸ್ತಿ ಸ್ವೀಕರಿಸಲು 60 ವರ್ಷ ನಿಗದಿ ಮಾಡಿರುವುದು ಅವರ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಹಾಗೂ ಶಿಫಾರಸು ಮಾಡಲು ಕ್ರೀಡಾ ಸಾಧಕರಿಗೆ ನೀಡಿದಂತೆ ಅಂಗವಿಕಲ ಸಾಧಕರಿಗೂ ವಯಸ್ಸಿನ ವಿನಾಯಿತಿ ನೀಡಿ, ಸಮಾನ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.