ADVERTISEMENT

ನೆಲಮಂಗಲ: ಅಮ್ಮನ ಗುಡ್ಡದಲ್ಲಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 23:05 IST
Last Updated 17 ಫೆಬ್ರುವರಿ 2024, 23:05 IST
ಆದಿಶಕ್ತಿ ಅಮ್ಮನ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು
ಆದಿಶಕ್ತಿ ಅಮ್ಮನ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು   

ನೆಲಮಂಗಲ: ಇಲ್ಲಿಗೆ ಸಮೀಪದ ಕನ್ನಮಂಗಲ ಗೇಟ್‌ ಬಳಿಯ ಅಮ್ಮನಗುಡ್ಡದ ಆದಿಶಕ್ತಿ ಅಮ್ಮನವರ 24ನೇ ಪ್ರತಿಷ್ಠಾಪನಾ ಜಾತ್ರಾ ಮಹೋತ್ಸವ ಹಾಗೂ 14ನೇ ರಥೋತ್ಸವವು ಶುಕ್ರವಾರ ವಿವಿಧ ಕಲಾತಂಡಗಳ ಪ್ರದರ್ಶನ, ಸಕಲ ಕಲಾವಾದ್ಯ ವೈಭವಗಳೊಂದಿಗೆ ನೆರವೇರಿತು.

ಕಳೆದ ಶನಿವಾರ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿಯ ಧ್ವಜಾರೋಹಣದಿಂದ ಪ್ರಾರಂಭವಾದ ಮಹೋತ್ಸವದಲ್ಲಿ ಪರಿಪೂರ್ಣ ಟ್ರಸ್ಟ್‌ನ ಶ್ರೀನಿವಾಸ ಸ್ವಾಮೀಜಿ, ಶಿವಾನಂದ ಆಶ್ರಮದ ರಮಣಾನಂದ ಸ್ವಾಮೀಜಿ, ಗೋಂದಿ ಮಠದ ನಾಮದೇವಾನಂದ ಸ್ವಾಮೀಜಿ ಭಾಗಿಯಾಗಿದ್ದರು.

ಚಂಡಿಕಾಹೋಮ, ಗಿರಿಜಾಕಲ್ಯಾಣ, ನಿತ್ಯವೂ ವಿವಿಧ ಉತ್ಸವಗಳನ್ನು ನಡೆಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸತ್ಯನಾರಾಯಣ ಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚುಂಚೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ ಪಾಲ್ಗೊಂಡಿದ್ದರು. ನಿತ್ಯವೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಸ್ಥಾಪಕ ನರಸಿಂಹಮೂರ್ತಿ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಶ್ಯಾಕಲದೇವನಪುರದ ಜಾನಪದ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ADVERTISEMENT
ಭಕ್ತರು ತೇರನ್ನು ಎಳೆದು ಭಕ್ತಿ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.