ಬೆಂಗಳೂರು:ಮಹಿಳಾ ಶಿಕ್ಷಣ ಹರಿಕಾರ ಈಶ್ವರಚಂದ್ರ ವಿದ್ಯಾಸಾಗರ ಅವರ ಸ್ಮರಣ ದಿನದ ಅಂಗವಾಗಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‍ಎಸ್) ವತಿಯಿಂದ 'ಸಮರ್ಪಣಾ ಸಪ್ತಾಹ' ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈಶ್ವರಚಂದ್ರ ವಿದ್ಯಾಸಾಗರ ಅವರು ಅಗಲಿದ ದಿನವಾದ ಜು.29ರಿಂದ ಆಗಸ್ಟ್ 4ರವರೆಗೆ ಸಂಘಟನೆಯು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿತ್ತು.
'ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ಬಹುಪತ್ನಿತ್ವ ವಿರುದ್ಧ ದನಿ ಎತ್ತುವ ಮೂಲಕ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ವಿದ್ಯಾಸಾಗರ ಅವರ ಸ್ಮರಣಾರ್ಥ ಒಂದು ವಾರದವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡೆವು' ಎಂದು ಸಂಘಟನೆಯ ಕಾರ್ಯದರ್ಶಿ ಎ.ಶಾಂತಾ ತಿಳಿಸಿದರು.
'ಸಪ್ತಾಹದ ಅಂಗವಾಗಿ ವಿದ್ಯಾಸಾಗರರ ಭಾವಚಿತ್ರ ರಚನೆ, ಪ್ರಗತಿಪರ ಗೀತೆಗಳು, ನೃತ್ಯ, ನಾಟಕಗಳು, ಕವನ ವಾಚನ, ಮಹಿಳೆಯರ ಸಮಸ್ಯೆಗಳನ್ನು ಕುರಿತ ವಿಷಯ ಮಂಡನೆಗಳು ನಡೆದವು. ಆನ್‍ಲೈನ್ ಮೂಲಕ ಚರ್ಚೆ ಹಮ್ಮಿಕೊಳ್ಳಲಾಯಿತು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.