ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ತಾಂತ್ರಿಕ ಸಾಕ್ಷ್ಯಾಧಾರ ಕಲೆ ಹಾಕುವ ಕಾರ್ಯವನ್ನು ಚುರುಕುಗೊಳಿಸಿರುವ ಪೊಲೀಸರು, ಆರೋಪಿಗಳ ಮೊಬೈಲ್ ಹಾಗೂ ಸಿಸಿಟಿವಿ ಡಿವಿಆರ್‌ನಿಂದ ಅಳಿಸಿ ಹಾಕಿದ್ದ ದತ್ತಾಂಶವನ್ನು ಮರು ಸಂಗ್ರಹಿಸಿದ್ದಾರೆ.
ಇದು ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಲಿದ್ದು, ದೋಷರೋಪಣಾ ಪಟ್ಟಿಯಲ್ಲಿ ಸೇರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆ ಮಾಡಿದ ಬಳಿಕ ಆರೋಪಿಗಳು ರೇಣುಕಸ್ವಾಮಿ ಅವರ ಮೊಬೈಲ್ ಅನ್ನು ನಾಶಪಡಿಸಿದ್ದರು. ಹಾಗಾಗಿ ನಕಲಿ ಸಿಮ್ ಪಡೆದು ರೇಣುಕಸ್ವಾಮಿ ಬಳಸುತ್ತಿದ್ದ ಇನ್‌ಸ್ಟಗ್ರಾಂ ಮತ್ತು ವಾಟ್ಸ್‌ಆ್ಯಪ್ ಖಾತೆಗಳ ದತ್ತಾಂಶವನ್ನು ಮರು ಸಂಗ್ರಹಿಸಿದ್ದಾರೆ.
ಪವಿತ್ರಾ ಗೌಡ ಅಲ್ಲದೇ ಕಿರುತೆರೆಯ ಇತರ ನಟಿಯರಿಗೂ ಅಶ್ಲೀಲ ಸಂದೇಶ ಹಾಗೂ ವಿಡಿಯೋ ಕಳುಹಿಸಿರುವ ಮಾಹಿತಿಯೂ ಲಭ್ಯವಾಗಿದೆ ಎಂದು ಮೂಲಗಳು ಹೇಳಿವೆ.
ಜೂನ್ 8 ರಿಂದ 10ರವರೆಗೆ ದರ್ಶನ್ ಅವರ ಚಲನವಲನಗಳ ದೃಶ್ಯಗಳನ್ನು ಅವರ ಮನೆಯ ಸಿಸಿಟಿವಿ ಡಿವಿಆರ್ ನಿಂದ ಮರುಸಂಗ್ರಹಿಸಲಾಗಿದೆ. ಹತ್ಯೆಗೆ ಬಳಸಿದ್ದ ಮೆಗ್ಗರ್ ಉಪಕರಣವನ್ನು ಧನರಾಜ್ ಎಂಬಾತ ಆನ್ ಲೈನ್ ಮೂಲಕ ಆರ್ಡರ್ ಮಾಡಿದ್ದ. ಅದನ್ನು ತಂದುಕೊಟ್ಟಿದ್ದ ಡೆಲಿವರಿ ಬಾಯ್‌ನನ್ನು ಸಹ ವಿಚಾರಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.